ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನವೀಕೃತ ಜಾಲತಾಣ ಲೋಕಾರ್ಪಣೆ ಹಾಗು ಸದಸ್ಯತ್ವ ನೋಂದಣಿಗೆ ಡಿಜಿಟಲ್ ಕಾಯಕಲ್ಪ
ಬಸವನಗುಡಿಯಲ್ಲಿರುವ ಮಹಾ ಸಭಾದ ಕೇಂದ್ರ ಕಚೇರಿ ಗಾಯತ್ರಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಅವರು. ನೂತನ ವೆಬ್ ಸೈಟ್ ಮಹಾಸಭಾದ ಸಮಸ್ತ ಚಟುವಟಿಕೆಗಳ ವಿವರಗಳನ್ನು ಒಳಗೊಂಡಿರಲಿದೆಯಲ್ಲದೇ, ಆನ್ ಲೈನ್ ಮೂಲಕ ಸದಸ್ಯತ್ವ ನೋಂದಣಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು. ಇದುವರೆಗೆ ಮಹಾಸಭೆಯ ಸದಸ್ಯತ್ವ ಪಡೆಯಲಿಚ್ಛಿಸುವವರು ಕಚೇರಿಗೆ ಬಂದು ಅರ್ಜಿ ಫಾರಂ ಪಡೆದು ತುಂಬಿ ಕೊಡಬೇಕಾಗಿದ್ದು ಹೊಸ ವ್ಯವಸ್ಥೆಯಲ್ಲಿ ಆನ್ ಲೈನ್ ನಲ್ಲೇ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಸದಸ್ಯತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.