ರಾಯಚೂರು - ಅಖಿಲ ಕರ್ನಾಟಕ ಬ್ರಾಹ್ನಣ ಮಹಾಸಭಾದ ಉತ್ತರ ಕರ್ನಾಟಕ ಕಾರ್ಯಕಾರಿಣಿ ಸಭೆ - 09 /03 /2022
ಅಖಿಲ ಕರ್ನಾಟಕ ಬ್ರಾಹ್ನಣ ಮಹಾಸಭಾದ ಉತ್ತರ ಕರ್ನಾಟಕ ಕಾರ್ಯಕಾರಿಣಿ ಸಭೆ ರಾಯಚೂರಿನಲ್ಲಿ ಯಶಸ್ವಿಯಾಗಿ ನಡೆಯಿತು.ಬ್ರಾಹ್ಮಣ ಸಮುದಾಯವನ್ನು ಸುಸ್ಥಿಗೆ ತರುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದಾಗಿ ಎಕೆಬಿಎಂಎಸ್ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.ಬ್ರಾಹ್ಮಣ ಸಮಯದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಮೇಲಕ್ಕೆತ್ತುವುದು ಸೇರಿದಂತೆ ಮಕ್ಕಳ ವಿಧ್ಯಾಭ್ಯಾಸಕ್ಕೆ ಯಾವ ರೀತಿ ನೆರವು ಒದಗಿಸಬಹುದು ಎನ್ನುವುದರ ಕುರಿತು ಅವರು ಪ್ರಸ್ತಾಪಿಸಿದರು.ಬ್ರಾಹ್ಮಣ ಮಕ್ಕಳಿಗೆ ವಿದ್ಯಾಬ್ಯಾಸಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ವಿದ್ಯಾನಿಧಿ ಸ್ಥಾಪನೆ ಹಾಗು ಬರುವ ದಿನಗಳಲ್ಲಿ ಹಮ್ಮಿಕೊಳ್ಳಲಿರುವ ಪ್ರತಿಭಾ ಪುರಸ್ಕಾರದ ಬಗ್ಗೆ ವಿವರಿಸಿದರು.
ಪ್ರತಿ ತಾಲುಕು ಮತ್ತು ಗ್ರಾಮೀಣ ಮಟ್ಟದಲ್ಲಿಯೂ ಕೂಡ ಗಾಯತ್ರಿ ಜಪಯಜ್ಞ, ಗುರುಪೂರ್ಣಿಮಾ, ಸಾಮೂಹಿಕ ಉಪನಯನ ಮುಂತಾದ ಕಾರ್ಯಕ್ರಮಗಳನ್ನು ಹಮ್ನಿಕೊಳ್ಳಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಭಟ್ , ಉಪಾಧ್ಯಕ್ಷರಾದ ರಾಜೇಂದ್ರ , ಪ್ರಮೋದ ಮನ್ನೋಳಿ, ಆರ್.ಎಸ್ ಮುತಾಲಿಕ, ಅವರು ಕೂಡ ಸಂಘಟನೆ ಬಗ್ಗೆ ವಿವರಿಸಿದರು.
ಹಿರಣ್ಣಯ್ಯಸ್ವಾಮಿಯವರು ಮಾತನಾಡಿ ಬ್ರಾಹ್ಮಣರ ಸಂಘಟನೆ ಅವಶ್ಯಕತೆ ಬಗ್ಗೆ ಪ್ರಸ್ತಾಪ ಮಾಡಿದರು. ಎಕೆಬಿಎಂಎಸ್ನ ಸಹ ಕಾರ್ಯದರ್ಶಿ ಕಾರ್ತಿಕ ಬಾಪಟ್ , ರಾಘವೇಂದ್ರ ಕುಲ್ಕರ್ಣಿ, ಮುರಳೀಧರ್,ಪುರುಷೋತ್ತಮ ಯುವ ಘಟಕದ ಸಂಚಾಲಕ ಸಂದೀಪ್ ರವಿ , ಕೂಡ ಮಾತನಾಡಿ ಮಹಾಸಭಾದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು .
ರಾಯಚೂರು ಬ್ರಾಹ್ಮಣ ಸಂಘಟನೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟಿತು .
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)
ಬೆಂಗಳೂರು.