NEWS DETAILS

Image Description

ವಿಪ್ರ ಕಪ್ 2022. 13.11.2022ರಂದು ಬೆಂಗಳೂರಿನ ವಸಂತವಲ್ಲಭ ನಗರದಲ್ಲಿ ರಾಜ್ಯಮಟ್ಟದ ಎಲ್ಲಾ ತ್ರಿಮತಸ್ಥ ಬ್ರಾಹ್ಮಣರಿಗೆ ಬ್ಯಾಡ್ಮಿಂಟನ್ ಪಂದ್ಯಾಟವು ನಡೆಯಿತು

ವಿಪ್ರ ಕಪ್ 2022.
13.11.2022ರಂದು ಬೆಂಗಳೂರಿನ ವಸಂತವಲ್ಲಭ ನಗರದಲ್ಲಿ ರಾಜ್ಯಮಟ್ಟದ ಎಲ್ಲಾ ತ್ರಿಮತಸ್ಥ ಬ್ರಾಹ್ಮಣರಿಗೆ ಬ್ಯಾಡ್ಮಿಂಟನ್ ಪಂದ್ಯಾಟವು ನಡೆಯಿತು. ಈ ಪಂದ್ಯಾಟವನ್ನು ಶ್ರೀ ವಿಲಾಸ್ ಖಾಡಿಲ್ಕರ್ ಹಾಗೂ ಶ್ರೀ ಶ್ರೀವತ್ಸ ಗೋಖಲೆ ಯವರು ಆಯೋಜಿಸಿದ್ದರು. ದ್ವಾರಕಾ ಲಾಡ್ಜಿಂಗ್ ನ ಮಾಲಕರಾದ ಶ್ರೀ ಶ್ರೀನಿವಾಸ್ ರಾವ್ ಅವರು ದೀಪ ಬೆಳಗಿಸಿ ಪಂದ್ಯಾಟಕ್ಕೆ ವಿದ್ಯುಕ್ತವಾಗಿ ಚಾಲನೆಯನ್ನು ನೀಡಿದರು. ಅವರೊಂದಿಗೆ ಹನುಮಗಿರಿ  ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಶ್ರೀ ಅಶ್ವಥ್ ನಾರಾಯಣ, ಹರ್ಷ ರಿಫ್ರೆಶ್ಮೆಂಟ್ ನ ಮಾಲಕರದ ಶ್ರೀ ಸುಧೀರ್, ಹನುಮಗಿರಿ ಬ್ರಾಹ್ಮಣ ಸಭಾದ ಕಾರ್ಯದರ್ಶಿಗಳಾದ ಶ್ರೀ ಮಂಜುನಾಥ್ ಉಪಸ್ಥಿತರಿದ್ದರು.
ಈ ಪಂದ್ಯಾಟವು 5 ವಿಭಾಗಗಳಲ್ಲಿ ನಡೆದಿದ್ದು ಸುಮಾರು 150ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿ ಈ ಪಂದ್ಯಾಟವನ್ನು ಯಶಸ್ವಿಯಾಗಿಸಿದರು.
ವಿಜೇತರ ವಿವರ :
1. ಪುರುಷರ ಸಿಂಗಲ್ಸ್ ವಿಭಾಗ :
  ವಿಜೇತರು - ಶ್ರೀ ವಿದ್ಯಾನಂದ
ರನ್ನರ್ ಅಪ್ - ಶ್ರೀ ಶ್ರೀಪತಿ
2. ಪುರುಷರ ಡಬಲ್ಸ್ ವಿಭಾಗ :
    ವಿಜೇತರು - ಶ್ರೀ ವಿದ್ಯಾನಂದ ಮತ್ತು ಶ್ರೀ ಕಿರಣ್
ರನ್ನರ್ ಅಪ್ - ಶ್ರೀ ವಾದಿರಾಜ್ ಮತ್ತು ಶ್ರೀ ಅಂಕಿತ್
3. ಮಹಿಳೆಯರ ಸಿಂಗಲ್ಸ್ ವಿಭಾಗ :
ವಿಜೇತರು - ಕು. ಪೂರ್ವಿ ಶರ್ಮ
ರನ್ನರ್ ಅಪ್ - ಕು. ಧನ್ಯಶ್ರೀ
4. ಮಹಿಳೆಯರ ಡಬಲ್ಸ್ ವಿಭಾಗ :
 ವಿಜೇತರು - ಕು.ಧನ್ಯಶ್ರೀ ಮತ್ತು ಕು.ಅಕ್ಷತಾ
ರನ್ನರ್ ಅಪ್ -ಕು.ಶ್ರೀಯಾ ದತ್ತ್ ಮತ್ತು ಕು.ಪ್ರಗ್ನಾ
5. ಪುರುಷರ 40+ ವಿಭಾಗ :
 ವಿಜೇತರು - ಶ್ರೀ ರಾಘವೇಂದ್ರ ಮತ್ತು ಶ್ರೀ ರತ್ನಪ್ರಸಾದ್ 
ರನ್ನರ್ ಅಪ್ - ಶ್ರೀ ರಾಘವೇಂದ್ರ ಮತ್ತು ಶ್ರೀ ಗುರು.  
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಸಹಕಾರ್ಯದರ್ಶಿಗಳಾದ ಶ್ರೀ ಕಾರ್ತಿಕ್ ಬಾಪಟ್ ಮಾತನಾಡಿ ಇಂತಹ ಕಾರ್ಯಕ್ರಮಗಳು ಬ್ರಾಹ್ಮಣ ಮಿತ್ರರನ್ನು ಸೇರಿಸಲು ಉತ್ತಮ ವೇದಿಕೆ ಎಂದು ಹೇಳಿದರು , ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಶ್ರೀ ಗಣಪತಿ ಜೋಶಿ, ಶ್ರೀ ನಿಖಿಲ್ ಭಾರದ್ವಾಜ್,  ಶ್ರೀ ಜಯಸಿಂಹ ಶತ್ರುಘ್ನ, ಶ್ರೀಮತಿ ಪೂರ್ಣಿಮಾ ಜಗನ್ನಾಥ್, ಶ್ರೀ ಸುದರ್ಶನ ಪಟವರ್ಧನ್, ಶ್ರೀ ವಿನೋದ್ ಖಾಡಿಲ್ಕರ್ ಮತ್ತು ಬ್ಯಾಡ್ಮಿಂಟನ್ ಕೋರ್ಟ್ ನ ಮಾಲಕರಾದ ಶ್ರೀ ಧನಂಜಯರವರು ಉಪಸ್ಥಿತರಿದ್ದರು.
ಶ್ರೀಮತಿ ರಮ್ಯಾ ವಿ ಖಾಡಿಲ್ಕರ್ ರವರು ಪ್ರಾರ್ಥಿಸಿದರು,  ಶ್ರೀ ಶ್ರೀವತ್ಸ ಗೋಖಲೆ ಮತ್ತು ಶ್ರೀ ವಿಲಾಸ್ ಖಾಡಿಲ್ಕರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿಶಾಖಾ ಗೋಖಲೆ ಯವರು ವಂದಿಸಿದರು.