ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀ ಉಮೇಶ ಶಾಸ್ತ್ರಿ (ಕಾರಂತ), ಕೂಟ ಮಹಾಜಗತ್ತು ಕೇಂದ್ರಾಧ್ಯಕ್ಷರಾದ ಶ್ರೀ ಸತೀಶ ಹಂದೆ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಅಧ್ಯಕ್ಷರಾದ ಡಾ। ಕೆ ಎಸ್ ಕಾರಂತರೊಂದಿಗೆ ಕರ್ನಾಟಕ ಬ್ಯಾಂಕಿನ ಎಂಡಿ ಶ್ರೀ ಎಂ ಎಸ್ ಮಹಾಬಲೇಶ್ವರ ರನ್ನು ಭೇಟಿ ಮಾಡಿ, ಮಹಾಸಭಾ ಕೈಗೊಂಡಿರುವ ಬೃಹತ್ ಸದಸ್ಯತಾ ಅಭಿಯಾನದ ಸಂಪೂರ್ಣ ಮಾಹಿತಿಯನ್ನು ನೀಡಿ ಅವರ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಲಾಯಿತು.
ಕರ್ಣಾಟಕ ಬ್ಯಾಂಕಿನ ಎಂಡಿ ಶ್ರೀ ಮಹಾಬಲೇಶ್ವರರು ತಮ್ಮ ಸಹಕಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಗೆ ಇರುವುದಾಗಿ ತಿಳಿಸಿ ಮಹಾಸಭಾ ಹಮ್ಮಿಕೊಂಡಿರುವ ಹಲವು ನೂತನ ಯೋಜನೆಗಳು ಯಶಸ್ವಿಯಾಗಲಿ ಎಂದು ಹಾರೈಸಿದರು.
ವಂದನೆಗಳೊಂದಿಗೆ,
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)