ತಾ. 15.03.2024 ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದಕ್ಷಿಣ ಕನ್ನಡ ತಾಲೂಕು ಸಮಿತಿ ಸಭೆಯನ್ನು ಜಿಲ್ಲಾ ಪ್ರದಾನ ಸಂಚಾಲಕರಾದ ಶ್ರೀ ಶ್ರೀಧರ ಹೊಳ್ಳ ಇವರ ಸಂಚಾಲಕತ್ವದಲ್ಲಿ ಹಮ್ಮಿಕೊಳ್ಳಲಾಯಿತು. ಸಭೆಯಲ್ಲಿ ರಾಜ್ಯ ಸಾಂಘಟನಾ ಕಾರ್ಯದರ್ಶಿ ಶ್ರೀ ಪೊಳಲಿ ಗಿರಿ ಪ್ರಕಾಶ್ ತಂತ್ರಿ ಹಾಗೂ ರಾಜ್ಯ ಸಹ ಕಾರ್ಯದರ್ಶಿ ಚೇತನಾ ದತ್ತಾತ್ರೇಯ ಉಪಸ್ಥಿತರಿದ್ದರು. ಸಭೆಗೆ ಎಂ ಪಿ ಕ್ಯಾಂಡಿಡೇಟ್ ಕ್ಯಾಪ್ಟನ್ ಬ್ರಿಜೇಶ್ ಚೌಟ ಬೇಟಿ ನೀಡಿ ನಮ್ಮನ್ನುದ್ದೇಶಿಸಿ ಮಾತನಾಡಿದರು, ಹಾಗೂ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೋರ್ವರ ಸಹಕಾರವನ್ನು ಯಾಚಿಸಿದರು. ಮಹಾಸಭಾದ ರಾಜ್ಯ, ಜಿಲ್ಲಾ ಹಾಗೂ ಮಂಗಳೂರು ತಾಲೂಕು ಸಮಿತಿಗೆ ಆಯ್ಕೆಗೊಂಡ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಕೈಗೊಂಡ ನಿರ್ಧಾರಗಳು:
1) ಮಂಗಳೂರಿನ, ವಿವಿಧ ಬ್ರಾಹ್ಮಣ ಸಮಾಜದ ಆಯ್ಕೆಗೊಂಡ ಮುಖ್ಯಸ್ಥರು ಸದಸ್ಯರ ಪಟ್ಟಿಯನ್ನು ನಮಗೆ ಶೀಘ್ರದಲ್ಲಿ ಒಪ್ಪಿಸುವುದು. ಅರ್ಜಿಯ ನಮೂನೆಯನ್ನು ಉಪಾಧ್ಯಕ್ಷರ ಬಳಿ ಚರ್ಚಿಸಿ ಎರಡು ದಿನದಲ್ಲಿ ಗ್ರೂಪ್ ನಲ್ಲಿ ಹಾಕಲಾಗುವುದು.
2) ನಮ್ಮೊಂದಿಗೆ ಬ್ರಾಹ್ಮಣ ಸಮಾಜಗಳು ಜಂಟಿಯಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಒಂದು ಕಾರ್ಯಕ್ರಮ ಕಡ್ಡಾಯವಾಗಿ AKBMS ಸಹಯೋಗದೊಂದಿಗೆ ಹಮ್ಮಿಕೊಳ್ಳ ತಕ್ಕದ್ದು.
3) ಮಹಾಸಭಾದ ಸದಸ್ಯತನವನ್ನು ಪಡೆದು ತಮ್ಮ ತಮ್ಮ ಸಮಾಜದಲ್ಲಿ membership drive ಕಾರ್ಯಕ್ರಮ ಹಮ್ಮಿಕೊಳ್ಳುವುದು.
4) ಮಹಾಸಭಾದ ಧ್ಯೇಯ ಉದ್ದೇಶಗಳನ್ನೊಳಗೊಂಡ pamplets ತಯಾರಿಸಿ ಬ್ರಾಹ್ಮಣ ಸಮಾಜದಲ್ಲಿ ಹಂಚುವುದು.
5) ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ, ವಿದ್ಯಾಲಯ, ಕಾಲೇಜು, ಹೋಟೆಲ್ ಇತ್ಯಾದಿಗಳೊಂದಿಗೆ ಮಾತನಾಡಿ ಬ್ರಾಹ್ಮಣ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಸೌಲಭ್ಯಗಳನ್ನು ಒದಗಿಸುವರೆ ವಿನಂತಿ ಮಾಡುವರೇ ನಿರ್ಧರಿಸಲಾಯಿತು.