ಇಂದು ದಿನಾಂಕ 09/05/2022 ರಂದು ಮಹಾಸಭಾದ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಆವರು ಮಹಾಸಭಾದ ಪದಾಧಿಕಾರಿಗಳೊಂದಿಗೆ ಹಾಗೂ ಹುಬ್ಬಳಿಯ ಸ್ಥಳೀಯ ವಿಪ್ರ ಮುಖಂಡರೊಡಗೂಡಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ವಿಪ್ರ ಬಂಧುಗಳ ಕುಂದು ಕೊರತೆಗಳ ಬಗ್ಗೆ ಸಮಾಲೋಚಿಸಿದರು , ಪ್ರಮುಖವಾಗಿ ಸಮಾಲೋಚಿಸಿದ ಅಂಶಗಳು ಈ ಕೆಳ ಕಂಡತಿವೆ 1.EWS certificate ಪರಿಧಿಯ ವ್ಯಾಪ್ತಿ ವಿಸ್ತಾರ ಹೆಚ್ಚಿಸುವುದು (ಅಂದರೆ ಪ್ರಸ್ತುತ EWS Certificate annu ಕೇವಲ ಒಂದು ವರ್ಷಕ್ಕೆ ನೀಡಲಾಗುತ್ತಿದೆ ಅದನ್ನು ಒಂದು ವರ್ಷದಿಂದ ಕನಿಷ್ಟ 3 ರಿಂದ 5 ವರ್ಷದ ಅವಧಿಗೆ ನೀಡುವುದು) ಶಿಕ್ಷಣ ಕ್ಷೇತ್ರದಲ್ಲಿ ಸೂಕ್ತ ಮೀಸಲಾತಿ (10 %) 2.ಸರ್ಕಾರದ ಪತ್ರಿಕಾ ಜಾಹೀರಾತು ನೀತಿಯಲ್ಲಿ ವಿಪ್ರ ಭಾಂದವರು ನಡೆಸುತ್ತಿರುವ ಪತ್ರಿಕೆಗಳಿಗೂ ಸೂಕ್ತ ಜಾಹೀರಾತು ಅವಕಾಶವನ್ನು ಕಲ್ಪಿಸಿ ಕೊಡುವುದು 3.ಹುಬ್ಬಳಿಯಲ್ಲಿ ವಿಪ್ರ ಸಮುದಾಯಕ್ಕೆ ಈಗಾಗಲೇ ಅನುದಾನವಾಗಿರುವ ಜಾಗೆಯಲ್ಲಿ ವಿಪ್ರ ಸಮುದಾಯದ ಅನುಕೂಲಕ್ಕೆ ಗಾಯತ್ರಿ ಭವನದ ನಿರ್ಮಾಣ ಹಾಗೂ ಅದರ ರೂಪು ರೇಶೆಗಳ ಬಗ್ಗೆ ಸಚಿವರೊಡನೆ ಮಾತುಕತೆ , ಹೀಗೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು , ಈ ಎಲ್ಲ ವಿಷಯಗಳ ಬಗ್ಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಎಲ್ಲ ರೀತಿಯ ಸಹಕಾರವನ್ನು ಕೊಡುವುದಾಗಿ ಭರವಸೆಯನ್ನು ಕೊಟ್ಟಿರುತ್ತಾರೆ.