ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ, ಮಾಜಿ ಅಡ್ವೊಕೇಟ್ ಜನರಲ್ ಅಶೋಕ ಹಾರನಹಳ್ಳಿ ಅವರು ಶನಿವಾರ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದರು.
ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಸರ್ವಜ್ಞ ಪೀಠದಲ್ಲಿ ಗೌರವಿಸಿದರು.
ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಭಟ್, ಮಹಾಸಭಾ ಕಾರ್ಯಕಾರಿ ಸಮಿತಿ ಸದಸ್ಯರಾದ ಉಮೇಶ ಶಾಸ್ತ್ರಿ, ಪೊಳಲಿ ಗಿರಿಪ್ರಕಾಶ ತಂತ್ರಿ, ಜಯಸಿಂಹ ಶತ್ರುಘ್ನ ಮತ್ತು ರವಿಕುಮಾರ್, ಹಿರಿಯ ವಕೀಲ ಪ್ರದೀಪಕುಮಾರ್, ಪರ್ಯಾಯ ಮಠ ದಿವಾನ ಕೆ. ವರದರಾಜ ಭಟ್, ಪರ್ಯಾಯ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ, ಉಡುಪಿ ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯ, ಕಾರ್ಯದರ್ಶಿ ಸಂದೀಪಕುಮಾರ್ ಮಂಜ, ಶ್ರೀಕಾಂತ ಉಪಾಧ್ಯಾಯ, ಕೃಷ್ಣಾನಂದ ಛಾತ್ರ ಮೊದಲಾದವರಿದ್ದರು.