ಮಹಾಸಭಾದ ಪ್ರಪ್ರಥಮ ಅಧ್ಯಕ್ಷರಾದ ದಿ. ಮಾಸ್ಟರ್ ಹಿರಣ್ಣಯ್ಯ ಅವರ ಸ್ಮರಣಾರ್ಥ ಬೆಂಗಳೂರಿನ ಪತ್ತಿ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ನಡೆದ ಹಾಸ್ಯೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ಹಾಸ್ಯ ಸಾಹಿತಿ ಶ್ರೀ ಎಂ ಎಸ್ ನರಸಿಂಹಮೂರ್ತಿ ಅವರಿಗೆ ಹಾಸ್ಯ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ "ಹಾಸ್ಯ ಸಾಹಿತ್ಯ ವಿಭೂಷಣ" ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು , ತದ ನಂತರ ಕರ್ನಾಟಕದ ಖ್ಯಾತ ಹಾಸ್ಯ ಸಾಹಿತಿಗಳಾದ ಶ್ರೀಮತಿ ಸುಧಾ ಬರಗೂರು, ಶ್ರೀ ಅಚ್ಯುತ ರಾವ್ ಪದಕಿ , ಶ್ರೀ ವೈ ವಿ ಗೊಂಡೂರಾವ್ ಹಾಗು ಶ್ರೀ ಏನ್ ರಮಾನಾಥ್ ಅವರಿಂದ ಹಸ್ಯೋತ್ಸವ ಕಾರ್ಯಕ್ರಮವು ಯೆಶಸ್ವಿ ಯಾಗಿ ಮೂಡಿ ಬಂದಿತು . ಈ ಸಂದರ್ಭದಲ್ಲಿ ಮಾಸ್ಟರ್ ಹಿರಣ್ಣಯ್ಯ ರವರ ಪುತ್ರರಾದ ಬಾಬು ಹಿರಣ್ಣಯ್ಯ ನವರು ಹಾಗು ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಸ ಗೋಡು ಜಯಸಿಂಹ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ಕಳೆದ ವರುಷ ಈ ಗೌರವ ಆ. ರಾ . ಮಿತ್ರವರಿಗೆ ಸಂದಿತ್ತು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು .