NEWS DETAILS

Image Description

ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರ ಭೇಟಿಯನ್ನು ಮಾಡಿ, ಮಹಾಸಭೆಯ ವತಿಯಿಂದ ಶ್ರೀಗಳವರಿಗೆ ವಿಶೇಷವಾದ ಗೌರವ ಸಮರ್ಪಣೆಯನ್ನು ಸಮರ್ಪಿಸಿದರು

ತಾರೀಖು 04/09/2022 ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಇದರ ರಾಜ್ಯ  ಉಪಾಧ್ಯಕ್ಷರಾದಂತಹ ಶ್ರೀಯುತ ಮಹೇಶ್ ಕಜೆ,  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಕಾರ್ಯಕಾರಿಣಿಯ ಸದಸ್ಯರು ಹಾಗೂ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರಾದ  ವಿದ್ವಾಂಸ ಶ್ರೀ ಕಶೆಕೋಡಿ ಸೂರ್ಯನಾರಾಯಣ ಭಟ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಕಾರ್ಯಕಾರಿಣಿಯ ಸದಸ್ಯರು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಪೊಳಲಿ ಶ್ರೀ ಗಿರಿಪ್ರಕಾಶ ತಂತ್ರಿಯವರು ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಅಶೋಕ್ ಹಾರನಹಳ್ಳಿ ಅವರ ಮಾರ್ಗದರ್ಶನದಂತೆ ಮಹಾಸಭೆಯು ಪ್ರಪ್ರಥಮವಾಗಿ ಆಯೋಜಿಸಿದ ಚಾತುರ್ಮಾಸ ವ್ರತ ನಿರತ ಯತಿಗಳನ್ನು ಮಹಾಸಭೆಯ ವತಿಯಿಂದ ಸಂದರ್ಶಿಸಿ ವಿಶೇಷ ಗೌರವ ಸರ್ಮರ್ಪಣೆಯ ಯೋಜನೆಯ ಅಂಗವಾಗಿ ಕರ್ನಾಟಕದ ಗಡಿ ಭಾಗದಲ್ಲಿರುವ ಎಡನೀರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರ ಭೇಟಿಯನ್ನು ಮಾಡಿ ಶ್ರೀಗಳೊಡನೆ ಮಹಾಸಭೆಯ ಧ್ಯೇಯೋದ್ದೇಶಗಳು, ಕಾರ್ಯವಿಧಾನಗಳು, ಯೋಜನೆಗಳು ಮತ್ತು ಸಂಘಟನೆಯ ಅವಶ್ಯಕತೆಗಳು ಇತ್ಯಾದಿ ವಿಚಾರಗಳ ಕುರಿತಂತೆ ಸುಧೀರ್ಘವಾದ ಮಾತುಕತೆ ನಡೆಸಿ ಸಮಾಜದ ಒಳಿತನ್ನು ಲೋಕ ಕ್ಷೇಮವನ್ನು ಪ್ರಾರ್ಥಿಸಿ ವಿಶೇಷವಾದಂತಹ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದುಕೊಂಡರು, ಮಾತ್ರವಲ್ಲ ಮಹಾಸಭೆಯ ವತಿಯಿಂದ ಶ್ರೀಗಳವರಿಗೆ ವಿಶೇಷವಾದ ಗೌರವ ಸಮರ್ಪಣೆಯನ್ನು ಸಮರ್ಪಿಸಿದರು. ಮಹಾಸಭೆಯ ಈ ಪ್ರಯತ್ನವನ್ನು ಅತ್ಯಂತ ಇಷ್ಟಪಟ್ಟು ಶ್ಲಾಘಿಸಿದ ಶ್ರೀಗಳು, ಮಠ ಮತ್ತು ಸಮಾಜದ ಮಧ್ಯದಲ್ಲಿ ಸೇತುವೆಯಾಗಿ ಕೊಂಡಿಯಾಗಿ ಮಹಾಸಭೆ ಮಾಡುತ್ತಿರುವ ಈ ಕೆಲಸ ಪ್ರಶಂಸನೀಯ ಎಂದು ಆಶೀರ್ವಾದದ ನುಡಿಗಳನ್ನು ಹೇಳಿದ್ದು ಮಾತ್ರವಲ್ಲದೇ, ಮಹಾಸಭೆಯ ಶ್ರೇಯೋಭಿವೃದ್ಧಿಗಾಗಿ ಹಲವಾರು ಸಲಹೆ ಸೂಚನೆಗಳನ್ನು ನೀಡಿದರು. ಈ ಭೇಟಿಯ ಸಂದರ್ಭದಲ್ಲಿ ಶ್ರೀಯುತ ಮಹೇಶ್ ಮಕಜೆಯವರ ಕುಟುಂಬದವರು,  ಶ್ರೀಯುತ ಕಶೆಕೋಡಿಯವರ ಕುಟುಂಬದವರು ಹಾಗೂ ಶ್ರೀಯುತ ಗಿರಿಪ್ರಕಾಶ ತಂತ್ರಿಗಳ ಕುಟುಂಬದವರೂ ಸಹ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಹಾಸಭೆಯ ವತಿಯಿಂದ ಪ್ರಸಿದ್ಧವಾದ ಅನಂತಪುರ ಅನಂತಪದ್ಮನಾಭ ದೇವಸ್ಥಾನವನ್ನು ಮತ್ತು ಮದ್ದೂರು ಶ್ರೀ ಮಹಾಗಣಪತಿ ದೇವಸ್ಥಾನವನ್ನು ಸಂದರ್ಶಿಸಿ, ಲೋಕ ಕ್ಷೇಮದ ಬಗ್ಗೆ ಪ್ರಾರ್ಥನೆಯನ್ನು ಸಲ್ಲಿಸಿ ವಿಶೇಷವಾದ ಕಾರ್ತಿಕ ಪೂಜಾ ಸೇವೆಯನ್ನು ಮಹಾಸಭೆಯ ವತಿಯಿಂದ ದೇವರಿಗೆ ಸಮರ್ಪಿಸಲಾಯಿತು.