ನಮ್ಮಲ್ಲಿರುವ ಎಲ್ಲಾ ವೈಮನಸ್ಸುಗಳನ್ನು ಬದಿಗಿಟ್ಟು ಸಂಘಟನೆಗೆ ಒತ್ತು ನೀಡಬೇಕು - ಹುಬ್ಬಳ್ಳಿಯ ಸಂಘಟನಾ ಸಭೆಯಲ್ಲಿ ಬಿ.ಎಸ್. ರಾಘವೇಂದ್ರ ಭಟ್ ಮನವಿ
ದಿನಾಂಕ 10.10.2022ರ ಸೋಮವಾರ ಬೆಳಿಗ್ಗೆ ಹುಬ್ಬಳ್ಳಿ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಸಭೆಯು ನೆರವೇರಿತು.
ಈ ಸಭೆಯಲ್ಲಿ ಮಹಾಸಭಾ ಉಪಾಧ್ಯಕ್ಷರಾದ ಶ್ರೀ ಪ್ರಮೋದ್ ಮನೋಳಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ಬಿ.ಎಸ್. ರಾಘವೇಂದ್ರ ಭಟ್ಟರು ಮಹಾಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಅಶೋಕ ಹಾರನಹಳ್ಳಿಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಮಹಾಸಭಾದ ಕಾರ್ಯ ಚಟುವಟಿಕೆಗಳನ್ನು ತಿಳಿಸುವುದರೊಂದಿಗೆ ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಪಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಬ್ರಾಹ್ಮಣ ಮುಖಂಡರೊಂದಿಗೆ ಚರ್ಚೆ ನಡೆಸಿದರು.
ಈಗಾಗಲೇ ಮಹಾಸಭಾ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಗಳಾದ ಬೈಲಾ ತಿದ್ದುಪಡಿ, ಸಮಾಜದ ಉಪಯೋಗಕ್ಕಾಗಿ 12ಕ್ಕೂ ಹೆಚ್ಚಿನ ಸಮಿತಿಗಳ ರಚನೆಯ ಕುರಿತು ವಿವರಣೆ, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ವಿಚಾರ, ಮತ್ತಿತರ ಮಹಾಸಭಾದ ಕಾರ್ಯವೈಖರಿಗಳನ್ನು ಸಂಘಟನಾ ಕಾರ್ಯದರ್ಶಿಗಳು ಸಭೆಯ ಮುಂದಿಟ್ಟರು.
ಹುಬ್ಬಳ್ಳಿ-ಧಾರವಾಡ ಜಿಲ್ಲಾ ಬ್ರಾಹ್ಮಣ ಮುಖಂಡರುಗಳಾದ ಡಾ. ಹನುಮಂತ ಡಂಬಲ್, ಸುನೀಲ್, ಎಸಿ ಗೋಪಾಲ್ , ವಿಜಯ ನಾಡಜೋಶಿ, ಮುರಳಿ ಕರ್ಜಗಿ, ಕೇಂದ್ರ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಉಮೇಶ್ ಶಾಸ್ತ್ರಿ, ಯುವ ವಿಭಾಗದ ವಿಲಾಸ ಕುಲಕರ್ಣಿ, ಹುಬ್ಬಳ್ಳಿ ಧಾರವಾಡ ಜಿಲ್ಲೆಯ ಹಿರಿಯ ಮುಖಂಡರು, ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.
ಸಭೆಯ ಕೊನೆಯಲ್ಲಿ ಮಹಾಸಭಾದ ಸದಸ್ಯತ್ವ ಆಂದೋಲನಕ್ಕೆ ಈ ಭಾಗದಲ್ಲಿ ಹೆಚ್ಚಿನ ಒತ್ತನ್ನು ನೀಡಲು ಕೋರಲಾಯಿತು