ನಮ್ಮ ಕನ್ನಡದ ಶ್ರೇಷ್ಠ ನಟಿ ಶ್ರೀಮತಿ ಮಾಳವಿಕಾ ಅವಿನಾಶ್ ಅವರನ್ನು ಭೇಟಿ ಮಾಡಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ವಿಭಾಗದ ವತಿಯಿಂದ ಜನವರಿ 6-7, 2024ರಂದು ನಡೆಯಲಿರುವ 3ನೇ ರಾಜ್ಯಮಟ್ಟದ ವಿಪ್ರ ಮಹಿಳಾ ಸಮ್ಮೇಳನ *"ಅಭಿಜಾತೆ-2024"*ರ ಬಗ್ಗೆ ವಿಷದವಾಗಿ ಚರ್ಚಿಸಿ, ಅವರಿಂದ ಸಲಹೆಗಳನ್ನು ಪಡೆಯಲಾಯಿತು. ಆಮಂತ್ರಣ ಪತ್ರವನ್ನು ನೀಡಿ, ಅವರನ್ನು ನಮ್ಮ ಅ.ಕ.ಬ್ರಾ.ಮ.ಸ. ಮಹಿಳಾ ವಿಭಾಗದ ಪರವಾಗಿ ಅಂದಿನ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು. ಶ್ರೀ ಅರುಣ್ ಮತ್ತು ಶ್ರೀ ಸುಬ್ರಹ್ಮಣ್ಯ ರವರೂ ಭೇಟಿಯ ಸಮಯದಲ್ಲಿ ಜೊತೆಗೂಡಿದ್ದರು.
ಇದೇ ಸಮಯದಲ್ಲಿ ಶ್ರೀಮತಿ ಮಾಳವಿಕಾರವರ ಪತಿ ಶ್ರೀ ಅವಿನಾಶ್ ರವರನ್ನೂ ಆಹ್ವಾನಿಸಿ, ಸಮ್ಮೇಳನಕ್ಕೆ ಸಹಕಾರ ನೀಡಬೇಕೆಂದು ಕೇಳಿಕೊಳ್ಳಲಾಯಿತು.
ನಮ್ಮ ಸಮ್ಮೇಳನದ ಸವಿವರಣೆಗಳನ್ನು ಪಡೆದ ಶ್ರೀಮತಿ ಮಾಳವಿಕಾರವರು ಹಾಗೂ ಶ್ರೀ ಅವಿನಾಶ್ ರವರು ಹೃತ್ಪೂರ್ವಕ ಸಂತೋಷ ವ್ಯಕ್ತಪಡಿಸಿ, ಆಮಂತ್ರಣವನ್ನು ಸ್ವೀಕರಿಸಿದರು ಎಂದು ತಿಳಿಸಲು ಹರ್ಷಿಸುತ್ತೇನೆ.
- ಡಾ. ಶುಭಮಂಗಳ ಸುನಿಲ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಚಾಲಕಿ, ಮಹಿಳಾ ವಿಭಾಗ