(03/09/2023) ಸಂಜೆ ಬ್ರಾಹ್ಮಣ ಸಂಘ ಟಿ ದಾಸರಹಳ್ಳಿ ಇವರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಪ್ರಯುಕ್ತ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು , ಈ ಸಂಧರ್ಭದಲ್ಲಿ ಮಹಾಸಭೆಯ ಉಪಾಧ್ಯಕ್ಷರುಗಳಾದ ಶ್ರೀ ಹಿರಿಯಣ್ಣ ಸ್ವಾಮಿ , ಶ್ರೀ ಸುಧಾಕರ ಬಾಬು ಹಾಗು ಮಹಾಸಭೆಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಕಾರ್ತಿಕ್ ಎಸ್ ಬಾಪಟ್ ಭಾಗವಹಿಸಿ ರಾಯರ ಕೃಪೆಗೆ ಪಾತ್ರರಾದರು. ಬ್ರಾಹ್ಮಣ ಸಂಘ ಟಿ ದಾಸರಹಳ್ಳಿ ಅಧ್ಯಕ್ಷರಾದ ಶ್ರೀ ಶ್ರೀಧರ್ ಮೂರ್ತಿ , ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಲ್ ಜ್ವಾಲಾರತಯ್ಯ , ಹಾಗು ಹಲವು ಸ್ಥಳೀಯ ಬ್ರಾಹ್ಮಣ ಮುಖಂಡರು ಈ ಕಾರ್ಯಕ್ರವನ್ನು ಅತ್ಯಂತ ಅಚ್ಚುಕಟ್ಟಾಗಿ ಏರ್ಪಡಿಸಿದ್ದರು.
ಈ ಸಂಧರ್ಭದಲ್ಲಿ ಸಂಗೀತ ವಿದ್ವಾನ್ ಡಾ|| ಶ್ರೀ ಚಿಂತಪಲ್ಲಿ ಶ್ರೀನಿವಾಸರವರು ಹಾಗು ಅವರ ಶಿಷ್ಯ ವೃಂದದಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಸುಸಂಧರ್ಭದಲ್ಲಿ ಮಹಾಸಭೆಯ ಸದಸ್ಯತ್ವ ಅಭಿಯಾನವು ಹಮ್ಮಿ ಕೊಳ್ಳಲಾಗಿತ್ತು ಮಹಾಸಭೆಯ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಮಹಾಸಭೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಹಾಗು ಅಧ್ಯಕ್ಷರ ಕಾರ್ಯ ಶೈಲಿಯ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಿದರು , ಹಾಗು ಸರಿ ಸುಮಾರು 50 ಕ್ಕೂ ಹೆಚ್ಚು ವಿಪ್ರ ಭಂದುಗಳು ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿ ಅಭಿಯಾನವನ್ನು ಅಭೂತಪೂರ್ವವಾಗಿ ಬೆಂಬಲಿಸಿದರು.