NEWS DETAILS

Image Description

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಲಬುರಗಿ ವಿಭಾಗದ ಬ್ರಾಹ್ಮಣ ಬಿಸನೆಸ್ ಸಮ್ಮೇಳನ ಎನ್ ವಿ ಸಂಸ್ಥೆಯ ಅನಂತರಾವ್ ದೇಶಮುಖ್ ಸಭಾಂಗಣದಲ್ಲಿ ನಡೆಯಿತು

..ಬ್ರಾಹ್ಮಣರು ಸ್ವಾವಲಂಬಿಗಳಾಗಬೇಕು ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ಮುಂದೆ ಬರಬೇಕು ಅನ್ನುವ ಏಕೈಕ ಉದ್ದೇಶದಿಂದ ಇದೇ ಮೊದಲ ಬಾರಿಗೆ ಈ ಸಮ್ಮೇಳನ  ಆಯೋಜಿಸಲಾಗಿದೆ ಅಂತ ಮಹಾಸಭಾದ ಉಪಾಧ್ಯಕ್ಷ ಶ್ರೀಧರ್ ಸರಾಫ್ ಹೇಳಿದ್ರು.ನಗರದ ವಿವಿಧೆಡೆ ವೃತ್ತಿಯಲ್ಲಿ ತೊಡಗಿರುವ ವಿಪ್ರರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.ಎನ್ ವಿ.ಸೊಸೈಟಿಯ ಪದಾಧಿಕಾರಿಗಳು ಸೇರಿದಂತೆ ನೂರಾರು ವಿಪ್ರ ಮುಖಂಡರು ಉಪಸ್ತಿತರಿದ್ದರು. 
ಅನೇಕ ಉದ್ಯಮಿಗಳು ಮತ್ತು ಸೇವಾ ಪೂರೈಕೆದಾರರು ವಿವಿಧ ಕ್ಷೇತ್ರಗಳ ಜನರು ತಮ್ಮ ಆಲೋಚನೆಗಳು ಮತ್ತು ವ್ಯಾಪಾರ ಮಾಡುವಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಹಂಚಿಕೊಂಡರು ಮತ್ತು ಸಮುದಾಯದಿಂದ ಅವರು ನಿರೀಕ್ಷಿಸುವ ಸಹಾಯವನ್ನು ವ್ಯಕ್ತಪಡಿಸಿದರು.

ಇದೇವೇಳೆ ಸ್ವಯಂ ಉದ್ಯೋಗದಲ್ಲಿ ಸಾಧನೆ ಮಾಡಿದ ಉದ್ಯಮಿ ಕಮಲಾಬಾಯಿ ಚಿಟಗುಪ್ಪಾಕರ್ ಹಾಗು ಶಶಿಕಾಂತ ವೈದ್ಯ ಅವರನ್ನ ಗೌರವಿಸಿ ಸನ್ಮಾನಿಸಲಾಯಿತು.
ಸಂಘಟಕರಾದ ರವೀಂದ್ರ ಟೆಂಗಳಿ, ಸತ್ಯಜೀತ್ ಕಿತ್ತೂರು, ನಾರಾಯಣ ಜಾಗೀರಧರ, ಪ್ರಮೋದ ದೇಶಪಾಂಡೆ, ಗುರುರಾಜ ದೇಶಪಾಂಡೆ, ಅನುಪ್ ಕುಲಕರ್ಣಿ, ಕಿರಣ ಹರಸೂರ ಉಪಸ್ಥಿತರಿದ್ದರು.