ಅಕ್ರಮ ಮತಾಂತರ ನಿಷೇಧ ಅತ್ಯಗತ್ಯ
ಅಕ್ರಮ ಮತಾಂತರದ ಮೂಲಕ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಯಾರಾದರೂ ಹಪಹಪಿಸುವುದು ಒಂದು ಮಾನಸಿಕ ಸಮಸ್ಯೆ. "ಮೂಲತಃ ಮತಾಂತರ ಎಂಬುದು ಒಂದು ಮಾನಸಿಕ ಹಿಂಸಾಚಾರ" ಎಂದು "ಆರ್ಷ ವಿದ್ಯಾ ಗುರುಕುಲಂ"ನ ಸಂಸ್ಫಾಪಕರೂ ಮಹಾನ್ ಸಂತರೂ ಆಗಿದ್ದ ಸ್ವಾಮಿ ದಯಾನಂದ ಸರಸ್ವತಿಯವರು ಹೇಳುತ್ತಿದ್ದರು. ಮಹಾತ್ಮ ಗಾಂಧಿಯವರೂ ಅದನ್ನೇ ಹಲವು ಬಾರಿ ಹೇಳಿದ್ದಾರೆ. ಗಾಂಧೀಜಿಯವರು ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಮತಾಂತರದ ಬಗ್ಗೆ ಹಲವಾರು ಲೇಖನಗಳನ್ನು, ಟಿಪ್ಪಣೆಗಳನ್ನು ಬರೆದಿದ್ದು, ಮತಾಂತರದ ಎಲ್ಲಾ ಆಯಾಮಗಳನ್ನೂ ನಿರ್ಭೀತಿಯಿಂದ, ನಿಷ್ಪಕ್ಷಪಾತದಿಂದ ವಿಶ್ಲೇಷಿಸಿದ್ದಾರೆ. ಮೊದಲಿಗೆ, ಗಾಂಧೀಜಿಯವರಿಗೆ ತಮ್ಮ ಸ್ವಧರ್ಮದಲ್ಲಿ ಅಚಲವಾದ, ದೃಢವಾದ ನಂಬಿಕೆ ಇತ್ತು. ಅದನ್ನು ಹೇಳಿಕೊಳ್ಳುವುದರಲ್ಲಿ ಯಾವುದೇ ಸಂಕೋಚ, ಹಿಂಜರಿಕೆಗಳೂ ಇರಲಿಲ್ಲ. ಅವರು ಹೇಳುತ್ತಾರೆ
“I call myself a Sanatani Hindu, because I believe in the Vedas, the Upanishads, the Puranas, and all that goes by the name of Hindu scripture, and therefore in avataras and rebirth; I believe in the varnashrama dharma in a sense, in my opinion strictly Vedic but not in its presently popular and distorted crude sense; I believe in the protection of cow. I do not disbelieve in murti puja.” (Young India: June 10, 1921)
ಅಕ್ರಮ ಮತಾಂತರಗಳ ವಿಷಯ ಹಾಗಿರಲಿ, `ಮತಾಂತರ’ ಎಂಬ ಪರಿಕಲ್ಪನೆಯ ಬಗ್ಗೆಯೇ ಗಾಂಧೀಜಿಯವರಿಗೆ ಸಮ್ಮತಿ ಇರಲಿಲ್ಲ. ಸರ್ವಧರ್ಮ ಸಮಾನತೆಯನ್ನು ಬಯಸುತ್ತಿದ್ದ ಅವರು ಮತಾಂತರಗಳು ಮೂಲತಃ ಸರ್ವಧರ್ಮಗಳ ಸಮನ್ವಯಕ್ಕೆ ಅಡ್ಡಿಯಾಗುತ್ತವೆ ಎಂದು ನಂಬಿದ್ದರು. ಮತ್ತೊಬ್ಬರನ್ನು ಮತಾಂತರ ಮಾಡುವುದಕ್ಕಿಂತಲೂ ಹೇಯವಾದ ಕೃತ್ಯ ಇನ್ನೊಂದಿಲ್ಲ ಎಂಬುದು ಅವರ ನಿಲುವಾಗಿತ್ತು. ಈ ಕೆಳಗಿನ ಉದ್ಧರಣೆಗಳು ಗಾಂಧೀಜಿಯವರ ಅಭಿಪ್ರಾಯವನ್ನು ಅತ್ಯಂತ ನಿಖರವಾಗಿ ಸಾರುತ್ತವೆ. ಇದನ್ನು ನೋಡಿ
“I disbelieve in the conversion of one person by another. My effort should never to be to undermine another's faith. This implies belief in the truth of all religions and, therefore, respect for them. It implies true humility.” (Young India: April 23, 1931).
“I believe that there is no such thing as conversion from one faith to another in the accepted sense of the word. It is a highly personal matter for the individual and his God. I may not have any design upon my neighbour as to his faith which I must honour even as I honour my own. Having reverently studied the scriptures of the world I could no more think of asking a Christian or a Musalman, or a Parsi or a Jew to change his faith than I would think of changing my own. (Harijan: September 9, 1935).
“It is impossible for me to reconcile myself to the idea of conversion after the style that goes on in India and elsewhere today. It is an error which is perhaps the greatest impediment to the world's progress toward peace. Why should a Christian want to convert a Hindu to Christianity? Why should he not be satisfied if the Hindu is a good or godly man? (Harijan: January 30, 1937)
“ನನಗೆ ಕಾನೂನು ಮಾಡುವ ಅಧಿಕಾರ ಇದ್ದಿದ್ದರೆ ಎಲ್ಲ ಮತಾಂತರಗಳನ್ನು ನಿಷೇಧಿಸುತ್ತಿದ್ದೆ” ಎಂದು ಗಾಂಧಿಜಿಯವರು ಹೇಳಿದ್ದ ಮಾತು ಸುಪ್ರಸಿದ್ಧವಾಗಿದೆ. ಹಿಂದೂ ಕುಟುಂಬಗಳಲ್ಲಿ ಮಿಷನರಿಗಳು ಎಬ್ಬಿಸುತ್ತಿದ್ದ ಬಿರುಗಾಳಿ ಗಾಂಧೀಜಿಯವರ ಮನಸ್ಸನ್ನು ಅಪಾರವಾಗಿ ನೋಯಿಸಿತ್ತು. ಸಾಮಾಜಿಕ ಸಂ಼ಘರ್ಷಕ್ಕೆ, ಕೌಟುಂಬಿಕ ತಲ್ಲಣಕ್ಕೆ ಹೇಗೆ ಮತಾಂತರಗಳು ಕಾರಣವಾಗುತ್ತವೆ ಎಂಬುದನ್ನು ಚೆನ್ನಾಗಿ ಬಲ್ಲವರಾದ್ದರಿಂದಲೇ ಅವರು ಸ್ಪಷ್ಟವಾಗಿ, “If I had the power and could legislate, I should stop all proselytizing. In Hindu households the advent of a missionary has meant the disruption of the family coming in the wake of change of dress, manners, language, food and drink . (November 5, 1935)” – ಎಂದಿದ್ದು.
ಮತಾಂತರದ ಬಗ್ಗೆ ಅವರ ಹೇಳಿಕೆಗಳು ಅಸಂಖ್ಯಾತವಾಗಿವೆ. ಅವೆಲ್ಲದರ ಉದ್ದೇಶ ಒಂದೇ - ಸಾಮಾಜಿಕ ಸಾಮರಸ್ಯ ಹದಗೆಡುವುದನ್ನು ತಡೆಯುವುದು, ಸರ್ವಧರ್ಮ ಸಮಾನತೆಯನ್ನು ಎತ್ತಿಹಿಡಿಯುವುದು. ಮತಾಂತರ ರಾಷ್ಟಾçಂತರವಾಗಿಯೂ ಪರಿಣಮಿಸುತ್ತದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದು ಎಲ್ಲರಿಗೂ ಗೊತ್ತಿರುವಂತದ್ದು. ಅಕ್ರಮ ಮತಾಂತರ ಯಾವಕಾಲಕ್ಕೂ ಒಪ್ಪತಕ್ಕ ವಿಷಯವಲ್ಲ. ಸ್ವ-ಇಚ್ಛೆಯಿಂದ ಯಾರು ಬೇಕಾದರೂ ಮತಾಂತರ ಹೊಂದಲು ನಮ್ಮ ಸಂವಿಧಾನದಲ್ಲಿ ಅವಕಾಶವಿದೆ. ಆದರೆ ಮತ್ತೊಬ್ಬರನ್ನು ಮತಾಂತರ ಮಾಡುವುದು ತನ್ನ ಹಕ್ಕು ಅಥವಾ ಕರ್ತವ್ಯ ಎಂದು ಯಾರೂ ಭಾವಿಸುವಂತಿಲ್ಲ. ತನ್ನ ಮತದ ಬಗ್ಗೆ ಪ್ರಚಾರ ಮಾಡುವಾಗಲೂ ಸಂವಿಧಾನ ವಿಧಿಸಿರುವ ಇತಿಮಿತಿಗಳನ್ನು ಮೀರಬಾರದು. ಧಾರ್ಮಿಕ ಹಕ್ಕು ಕೇವಲ ಒಂದು ಮತಕ್ಕೆ ಮಾತ್ರ ಸೀಮಿತವಾದ ಸ್ವಾತಂತ್ರವಲ್ಲ. ಇದನ್ನು ೧೯೭೭ರಲ್ಲಿ ಸುಪ್ರೀಮ್ ಕೋರ್ಟು ಸ್ಪಷ್ಟವಾಗಿ ಹೇಳಿದೆ:
“Article 25 guarantees to all persons right to freedom and conscience and the right freely to profess, practice and propogate religion subject to public order, morality and health. The word 'propogate' has been used in the Article as meaning to transmit or spread from person to person or from place to place. The Article does not grant right to convert other person to one's own religion but to transmit or spread one's religion by an exposition of its tenets. The freedom of religion enshrined in Art. 25 is not guaranteed in respect of one religion only but covers all religions alike which can be properly enjoyed by a person if he exercises his right in a manner commensurate with the like freedom of persons following other religion. What is freedom for one is freedom for the other in equal measure and there can, therefore, be no such thing as a fundamental right to convert any person to one's own religion.” [Rev. Stainislaus vs State Of Madhya Pradesh & Ors on 17 January, 1977, Equivalent citations: 1977 AIR 908, 1977 SCR (2) 611].
ಭಾರತದಲ್ಲಿಅಕ್ರಮ ಮತಾಂತರಗಳನ್ನು ಸೂಕ್ತ ಕಾನೂನುಗಳ ಮೂಲಕ ಹತ್ತಿಕಬೇಕು ಎಂಬ ಬೇಡಿಕೆ ಬಹಳ ಹಿಂದಿನಿದಲೂ ಇದೆ. ಇದು ಕೇವಲ ಒಂದು ಮತವನ್ನು ಉದ್ದೇಶದಲ್ಲಿ ಇಟ್ಟುಕೊಂಡಿದ್ದಲ್ಲ. ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ ಇದ್ದಹಾಗೆಯೇ ಎಲ್ಲರಿಗೂ ತಮ್ಮತಮ್ಮ ಧಾರ್ಮಿಕತೆಗಳನ್ನು ಅನ್ಯರ ಅಕ್ರಮಗಳಿಂದ ಸಂರಕ್ಷಿಸಿಕೊಳ್ಳುವ ಹಕ್ಕೂ ಇರುತ್ತದೆ. ಈ ಹಕ್ಕು ಎಲ್ಲ ಮತೀಯರಿಗೂ ಸಮಾನವಾಗಿದೆ. ಬ್ರಿಟಿಷ್ ಆಡಳಿತದ ಕಾಲದಲ್ಲೇ ಕೆಲವು ಪ್ರಾಂತ್ಯಗಳ ರಾಜರುಗಳು ಅಕ್ರಮ ಮತಾಂತರಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನಿಷೇಧಿಸಿದ್ದರು. ರಾಯಗಢ್ ಸ್ಟೇಟ್ ಕನ್ವರ್ಷನ್ ಆ್ಯಕ್ಟ್ ೧೯೩೬, ಪಾಟ್ನಾ ಫ್ರೀಡಮ್ ಆಫ್ ರಿಲಿಜನ್ ಆ್ಯಕ್ಟ್ ೧೯೪೨, ಸರ್ಗುಜ ಸ್ಟೇಟ್ ಅಪೋಸ್ಟೆಸಿ ಆ್ಯಕ್ಟ್ ೧೯೪೫, ಉದೈಪುರ್ ಸ್ಟೇಟ್ ಆ್ಯಂಟಿ ಕನ್ವರ್ಷನ್ ಆ್ಯಕ್ಟ್ ೧೯೪೬ - ಕೆಲವು ಉದಾಹರಣೆಗಳು.
೧೯೫೦ರ ದಶಕದಲ್ಲಿ ಅಕ್ರಮ ಮತಾಂತರಗಳು ಹೆಚ್ಚಾದಾಗ ಅಂದಿನ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ನಾಗಪುರ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶ ಭವಾನಿ ಶಂಕರ್ ನಿಯೋಗಿಯವರ ನೇತೃತ್ವದಲ್ಲಿ ಒಂದು ತನಿಖಾ ಸಮಿತಿಯನ್ನು ನೇಮಿಸಿತ್ತು.
ನಿಯೋಗಿ ಸಮಿತಿ ನೂರಾರು ಹಳ್ಳಿಗಳಲ್ಲಿ ಸಂಚರಿಸಿ ತನಿಖೆ ಮಾಡಿತು. ಸಮಿತಿಯ ಮುಂದೆ ೩೭೫ ಲಿಖಿತ ಹೇಳಿಕೆಗಳು ಬಂದವು. ಸಮಿತಿಯನ್ನು ವಿರೋಧಿಸಿ ರೋಮನ್ ಕ್ಯಾಥೋಲಿಕ್ ಚರ್ಚ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತು. ಆದರೆ ಕೋರ್ಟ್ ಅದರ ಅರ್ಜಿಯನ್ನು ವಜಾ ಮಾಡಿತು.
ವಿದೇಶಿ ಮಿಷನರಿಗಳಿಂದ ಮತಾಂತರ ಪ್ರಯತ್ನ ಹಾಗೂ ಹಿಂದೂ ದೇವರುಗಳ ಅವಹೇಳನ ತೀವ್ರವಾಗಿ ನಡೆಯುತ್ತಿರುವುದನ್ನು ಸಮಿತಿಯ ತನಿಖೆ ಖಚಿತಪಡಿಸಿತು. ಮಿಷನರಿಗಳ ಚಟುವಟಿಕೆ, ಸಾಹಿತ್ಯ, ಭಾಷಣ ಎಲ್ಲವನ್ನೂ ಸಮಿತಿಯ ವರದಿಯಲ್ಲಿ ವಿವರವಾಗಿ ದಾಖಲಿಸಲಾಗಿದೆ. `ಮತಾಂತರದ ದುರುದ್ದೇಶ ಇಟ್ಟುಕೊಂಡು ಆಸ್ಪತ್ರೆ ಹಾಗೂ ಶಾಲೆಗಳನ್ನು ದುರ್ಬಳಕೆ ಮಾಡಲಾಗುತ್ತಿದೆ' ಎಂದು ದೃಢಪಡಿಸಿದ ನಿಯೋಗಿ ಸಮಿತಿ ಮತಾಂತರಗಳನ್ನು ಶಾಸನಾತ್ಮಕವಾಗಿ ನಿಷೇಧಿಸಬೇಕು ಎಂದು ಶಿಫಾರಸು ಮಾಡಿತು. ಅಕ್ರಮ ಮತಾಂತರ ತಡೆಯುವ ಶಾಸನಗಳು ೧೯೬೭ರಲ್ಲಿ ಒರಿಸ್ಸಾ ಹಾಗೂ ೧೯೬೮ರಲ್ಲಿ ಮಧ್ಯಪ್ರದೇಶಗಳಲ್ಲಿ ಜಾರಿಗೆ ಬಂದವು. ೧೯೭೮ರಲ್ಲಿ ಅರುಣಾಚಲ ಪ್ರದೇಶದಲ್ಲೂ ಈ ಕಾಯ್ದೆ ಜಾರಿಯಾಯಿತು,. ಕ್ರಮೇಣ ದೇಶದ ಇನ್ನೂ ಕೆಲವು ರಾಜ್ಯಗಳಲ್ಲಿ ಅಕ್ರಮ ಮತಾಂತರ ನಿಷೇಧ ಕಾಯ್ದೆ ಜಾರಿಯಾಯಿತು.
ಈಗ ಕರ್ನಾಟಕದಲ್ಲೂ ಅಂತಹ ಒಂದು ಕಾನೂನನ್ನು ತರುತ್ತಿರುವುದು ಸ್ವಾಗತಾರ್ಹವಾದ ಬೆಳವಣಿಗೆ. ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡಿರುವ ಮತಾಂತರ ನಿಷೇಧ ಮಸೂದೆಯನ್ನು ಗಮನಿಸಿದರೆ ಇದು ಯಾವುದೇ ಧರ್ಮದ ವಿರುದ್ಧವಾಗಿಲ್ಲ, ಯಾವುದೇ ಧಾರ್ಮಿಕ ಆರಾಧನೆಗಳಿಗೆ ಕುತ್ತು ತರುವುದಿಲ್ಲ ಎನ್ನಬಹುದು. “ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ. ಯಾವುದೇ ಮನೆಗಳು ಮತ್ತು ಮನಸ್ಸುಗಳಿಗೆ ಕೆಟ್ಟದ್ದಾಗಬಾರದು. ಬಡವರು ಮತ್ತು ದೀನದಲಿತರು ಇದಕ್ಕೆ ಬಲಿಯಾಗಬಾರದು. ಬಡತನವನ್ನು ದುರುಪಯೋಗಪಡಿಸಿಕೊಂಡು ಇನ್ನೊಂದು ಧರ್ಮಕ್ಕೆ ಆಮಿಷಅಥವಾ ಬಲವಂತದ ಮತಾಂತರ ಮಾಡುವುದನ್ನು ತಪ್ಪಿಸಬೇಕು” ಎನ್ನುವುದು ಮುಖ್ಯಮಂತ್ರಿಗಳು ನೀಡಿದ್ದ ಹೇಳಿಕೆ. ಅಕ್ರಮವಾಗಿ ಮತಾಂತರ ಮಾಡುವವರನ್ನು ಗರಿಷ್ಠ ೧೦ ವರ್ಷ ಜೈಲು ಶಿಕ್ಷೆಗೆ ಗುರಿಪಡಿಸುವ ಅಂಶವನ್ನು ಪ್ರಸ್ತುತ `ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ಮಸೂದೆ ೨೦೨೧'ರಲ್ಲಿ ಅಳವಡಿಸಲಾಗಿದೆ. ಹಳ್ಳಿಗಳಲ್ಲಿ ಅಕ್ರಮ ಮತಾಂತರ ಇಂದು ದೊಡ್ಡ ಪಿಡುಗಾಗಿರುವ ಹಿನ್ನೆಲೆಯಲ್ಲಿ ಇದನ್ನು ವಿಶ್ಲೇಷಿಸಬೇಕಾಗುತ್ತದೆ. ಮತಾಂತರಕ್ಕಾಗಿ ನಗದು, ಉಡುಗೊರೆ, ಯಾವುದೇ ಪ್ರತಿಫಲ, ಧಾರ್ಮಿಕ ಸಂಸ್ಥೆಗಳು ನಡೆಸುವ ಶಾಲೆ, ಕಾಲೇಜಿಗಳಲ್ಲಿಉದ್ಯೋಗ, ಉಚಿತ ಶಿಕ್ಷಣದ ಆಮಿಷ, ಮದುವೆಯಾಗುವುದಾಗಿ ವಾಗ್ದಾನ, ಉತ್ತಮಜೀವನ ಶೈಲಿ, ದೈವಿಕ ಸಂತೋಷದ ಆಸೆ ಆಮಿಷ, ಒಂದು ಧರ್ಮಕ್ಕೆ ವಿರುದ್ಧವಾಗಿ ಮತ್ತೊಂದು ಧರ್ಮವನ್ನು ವೈಭವೀಕರಿಸುವುದು ಇವೆಲ್ಲವೂ ವರದಿಯಾಗುತ್ತಿರುವ ವಿದ್ಯಮಾನಗಳು. ಈ ಹಿನ್ನೆಲೆಯಲ್ಲಿ ಒಂದು ಕಾನೂನಾತ್ಮಕ ವ್ಯವಸ್ಥೆಯ ಮೂಲಕವೇ ಇಂತಹ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ಯಾವಾಗಲೂ ಸೂಕ್ತ. ಹಲವು ಧರ್ಮಗಳಿರುವ ದೇಶ ನಮ್ಮದು. ಇಂತಹ ದೇಶದಲ್ಲಿ ಆಯಾ ಧರ್ಮಗಳ ಅಸ್ಮಿತೆಯ ರಕ್ಷಣೆಆಗಬೇಕು. ಮತಾಂತರ ಸ್ವಂತಇಚ್ಛೆಯಿದ ಕೂಡಿರಬೇಕು. ಬಲವಂತದ ಮತಾಂತರವನ್ನು ಕಾನೂನಿನ ಮೂಲಕ ನಿಯಂತ್ರಿಸುವುದು ತಪ್ಪಲ್ಲ.
ಈ ಮಸೂದೆಯು ಅಕ್ರಮ ಮತಾಂತರವನ್ನು ಮಾತ್ರ ನಿರ್ಬಂಧಿಸುತ್ತಿದೆ. ಮತಾಂತರ ಪಿಡುಗಿನ ವಿರುದ್ಧ ಅನೇಕ ಧಾರ್ಮಿಕ ಮುಖಂಡರು, ಪ್ರಜ್ಞಾವಂತರು ಮೊದಲಿನಿಂದ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇದು ಸಮಾಜದ ಮೇಲೆ ಉಂಟು ಮಾಡುತ್ತಿರುವ ಅಹಿತಕರ ಪರಿಣಾಮದ ಬಗ್ಗೆ ಸರ್ಕಾರವನ್ನು ಎಚ್ಚರಿಸುತ್ತಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಮಸೂದೆಯಲ್ಲಿ ಸಮಗ್ರ ಸಮಾಜದ ಹಿತ ಅಡಗಿದ್ದರೆ ಅದನ್ನು ಗುರುತಿಸುವುದರಲ್ಲಿ ತೊಡಕೇನಿದೆ?
ಅಶೋಕ ಹಾರನಹಳ್ಳಿ.
ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ. ಬೆಂಗಳೂರು.