NEWS DETAILS

Image Description

ಚನ್ನರಾಯಪಟ್ಟಣ ತಾಲೂಕಿನಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು

ದಿನಾಂಕ 19.3.22 ಶನಿವಾರ ಸಂಜೆ ಆರು ಗಂಟೆಗೆ ಚನ್ನರಾಯಪಟ್ಟಣ ತಾಲೂಕು ಬ್ರಾಹ್ಮಣ ಸಭಾ ವತಿಯಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ರವರಿಗೆ ಹಾಗು ಒಕ್ಕಲಿಗ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದಂತಹ ಚೆನ್ನರಾಯ ಪಟ್ಟಣದ  ಶಾಸಕರಾದ ಶ್ರೀ ಬಾಲಕೃಷ್ಣ ಅವರಿಗೆ   ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ  ಶ್ರೀ ರಾಜೇಂದ್ರ ಪ್ರಸಾದ್. ಸಹ ಕಾರ್ಯದರ್ಶಿಗಳಾದ ಪುರುಷೋತ್ತಮ್, ಕಾರ್ತಿಕ್ ಬಾಪಟ್. ಯುವ ವೇದಿಕೆಯ ರಾಜ್ಯ ಸಂಚಾಲಕರಾದ ಸಂದೀಪ್ ರವಿ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಬಿ ಎಸ್ ರಾಘವೇಂದ್ರ ಭಟ್ ಮತ್ತು ಐಟಿ ವಿಭಾಗದ ಮುಖ್ಯಸ್ಥರಾದ ಶ್ರೀಕೃಷ್ಣ ಸ್ವಾಮಿಯವರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾದ ಅನಂತರಾಮುರವರು ಉಪಸ್ಥಿತರಿದ್ದರು ಚನ್ನರಾಯಪಟ್ಟಣ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಏರ್ಪಡಿಸಿದ್ದರು ಸುಮಾರು ತಾಲೂಕಿನ 250 ಜನ ವಿಪ್ರ ಬಾಂಧವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ನೆರವೇರಿತು ಮಹಾಸಭಾದ ಅಧ್ಯಕ್ಷರು ಮಾತನಾಡಿ ಮಹಾಸಭಾದ ಎಲ್ಲ ಯೋಜನೆಗಳನ್ನು ವಿವರಿಸಿದರು ಹಾಗೂ ಬ್ರಾಹ್ಮಣ ಸಮಾಜದ ಸಂಸ್ಕೃತಿ ಸ್ವಾವಲಂಬನೆಯ ಬಗ್ಗೆ ಮಾತನಾಡಿದರು ಹಾಗೂ ಮಹಾಸಭಾದ ಸದಸ್ಯತ್ವವನ್ನು ಪಡೆದು ಸಂಘಟನೆಯನ್ನು ಬಲಪಡಿಸಬೇಕೆಂದು ಮನವಿ ಮಾಡಿದರು, ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಬಾಲಕೃಷ್ಣ ಅವರು ತಾಲೂಕು ಬ್ರಾಹ್ಮಣ ಸಮಾಜ ಚೆನ್ನರಾಯಪಟ್ಟಣ ನಿರ್ಮಿಸಲು ಉದ್ದೇಶಿಸಿಯೂರುವ ನೂತನ ಕಟ್ಟಡಕ್ಕೆ 10 ಲಕ್ಷ ರೂಪಾಯಿಗಳ ಅನುದಾನವನ್ನು ಸ್ಥಳದಲ್ಲೇ ಘೋಷಿಸಿದರು ಹಾಗು ಮಹಾಸಭಾದ ನೂತನ ಯೋಜನೆಗಳನ್ನು ಶ್ಲಾಘಿಸಿದರು. 

ವಂದನೆಗಳೊಂದಿಗೆ,
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)