ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದಕ್ಷಿಣ ಕನ್ನಡ ಇದರ ವತಿ ಇಂದ, ಇಂದು 16.03.2024 ಬೆಳಿಗ್ಗೆ 9 ಗಂಟೆಗೆ , ಅಯೋಧ್ಯೆಯಲ್ಲಿ ಶ್ರೀರಾಮದೇವರ ಪ್ರತಿಷ್ಠಾಪನೆ ಮತ್ತು 48 ದಿನಗಳ ಮಂಡಲೋತ್ಸವವನ್ನು ವೈಭವದಿಂದ ನೆರವೇರಿಸಿ ಉಡುಪಿಗೆ ಮರಳುತ್ತಿರುವ ಶ್ರೀ ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರನ್ನು ಮಂಗಳೂರು ಏರ್ಪೋರ್ಟ್ ನಲ್ಲಿ ಆಧಾರ ಪೂರ್ವಕವಾಗಿ ಸ್ವಾಗತಿಸಿದ ಸುಂದರ ಕ್ಷಣ. ತದನಂತರ ಮೆರವಣಿಗೆ ಸಮೇತ ನಾವು ಅವರೊಂದಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಮುಲ್ಕಿ ಬಪ್ಪನಾಡು ದೇವಸ್ಥಾನಗಳಿಗೆ ಬೇಟಿ ನೀಡಿ ಸ್ವಾಗತಿಸಿ ಅವರನ್ನು ಉಡುಪಿಗೆ ಗೌರವಪೂರ್ವಕವಾಗಿ ಬೀಳ್ಕೊಂಡು ಮರಳಿದೆವು.