NEWS DETAILS

Image Description

ಧಾರವಾಡ ಜಿಲ್ಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಘಟನೆ ಮತ್ತು ಸದಸ್ಯತ್ವ ಅಭಿಯಾನ

ಮಾನ್ಯ ಅಧ್ಯಕ್ಷರು ಶ್ರೀ ಅಶೋಕ್ ಹಾರ್ನಹಳ್ಳಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ  ಬೆಂಗಳೂರು  ಇವರಿಗೆ .18-8-23 ಶನಿವಾರ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕಮಡೊಳ್ಳಿ. ಸಂಶಿ. ಗುಡುಗೇರಿ. ಶ್ರೀ ಗುರು ಗೋವಿಂದ ಭಟ್ಟರ ಕ್ಷೇತ್ರ ಕಳಸ. ಗ್ರಾಮಗಳಿಗೆ ಹೋಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಘಟನೆ ಮತ್ತು ಸದಸ್ಯತ್ವ ಅಭಿಯಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕಮಡೊಳ್ಳಿಯಲ್ಲಿ ರಾಮೇಶ್ವರ ಗುಡಿಯಲ್ಲಿ ವಿಪ್ರರು ಸೇರಿಸಿ ಅಭಿಯಾನ ಪ್ರಾರಂಭ ಮಾಡಿದೆವು. ಹೋಮ ಹವನಗಳನ್ನು ಇಟ್ಟುಕೊಂಡಿದ್ದರು   ಪೂಜ್ಯರಾದ ವಿದ್ವಾಂಸರಾದ ಶ್ರೀ ಶಂಕರ ಭಟ್ಟರನ್ನು ಶಾಲು ಹೊದಿಸಿ ಸನ್ಮಾನಿಸಿದೇವು ಈ ಸಂದರ್ಭದಲ್ಲಿ ಅಶೋಕ್ ಪಾಳಂದಿ ಶ್ರೀ ಗಿರೀಶ್ ಕುಲಕರ್ಣಿ ಶ್ರೀ ಪುರೋಹಿತ್. ಪ್ರದೀಪ್ ಕುಲಕರಣಿ ಮುಂತಾದವರಿದ್ದರು. ಅದೇ ರೀತಿ ಸಂಶಿ ಗ್ರಾಮದಲ್ಲಿ ಶ್ರೀ ಗುರುದತ್ತ ಮಂದಿರದಲ್ಲಿ ವಿಪ್ರ ಸಭೆ ಆಯೋಜಿಸಲಾಗಿತ್ತು   ಅಲ್ಲಿಯೂ ಕೂಡ ವಿಪ್ರ ಸಮುದಾಯದ ಏಳಿಗೆಗಾಗಿ ಎಲ್ಲರೂ ಸದಸ್ಯರಾಗಬೇಕು ಮತ್ತು ಎಲ್ಲರೂ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕೆಂದು ವಿನಂತಿ ಮಾಡಿಕೊಂಡೆವು. ಈ ಸಂದರ್ಭದಲ್ಲಿ ಸ್ಥಳೀಯರಾದ ಶ್ರೀ ಗಿರೀಶ್ ದೇಸಾಯಿ. ಪವನ್ ಪಾಟೀಲ್ ಆನಂದ್ ದೇಸಾಯಿ ಕುಂದುಗೋಳ ಪಟ್ಟಣ ಪಂಚಾಯತಿಯ ಸದಸ್ಯರಾದ ಶ್ರೀ ಶಾಮಸುಂದರ ದೇಸಾಯಿ ತಾಯಂದಿರು ಯುವಕರು ಉಪಸ್ಥಿತರಿದ್ದರು. ಅದೇ ರೀತಿ ಸಂಜೆ 3:00ಗೆ ಗುಡಗೇರಿ ಗ್ರಾಮದಲ್ಲಿ ದತ್ತ ಮಂದಿರದಲ್ಲಿ ವಿಪ್ರಸಭೆಯನ್ನು ಕರೆಯಲಾಗಿತ್ತು ಸಭೆಯಲ್ಲಿ ಸದಸ್ಯತ್ವದ ಬಗ್ಗೆ ಸದಸ್ಯತ್ವದ ಫಾರ್ಮ್ ಗಳನ್ನು ವಿತರಿಸಿ ವಿಪ್ರರು ಸಂಘಟನೆ ಮತ್ತು ಸದಸ್ಯತ್ವ ರಾಜ್ಯ ಅಧ್ಯಕ್ಷರ ಸಂಘಟನೆ ಬಗ್ಗೆ ಕಾಳಜಿ ಮತ್ತು ಮುಂದಿನ ದಿನಗಳಲ್ಲಿ ಕುಂದಗೋಳ ತಾಲೂಕ ಸಮಾವೇಶ ಬಗ್ಗೆ ಮಾತನಾಡಿದೆವು ಈ ಸಂದರ್ಭದಲ್ಲಿ. ವಿಪ್ರ ಹಿರಿಯ ಮುಖಂಡರಾದ ಸಂಘಟನಾ ಚತುರರು ಆದ ಮಾನ್ಯ ಶ್ರೀ ಪ್ರಕಾಶ್ ಜೋಶಿ ಮಾತನಾಡಿ ರಾಜ್ಯದಲ್ಲಿ ಶ್ರೀ ಅಶೋಕ್ ಹಾರನಹಳ್ಳಿ ಯವರ ನೇತೃತ್ವದಲ್ಲಿ ಸಂಘಟನೆ ಆಗುತ್ತಿದ್ದು ಇನ್ನೂ ಹೆಚ್ಚು ಬಲ ಇದಕ್ಕೆ ಬರಲಿ ಹೆಚ್ಚು ಸದಸ್ಯರು ಆಗಬೇಕೆಂದು ಕರೆಕೊಟ್ಟರು ಸಭೆಯಲ್ಲಿ ಶ್ರೀ ಆನಂದ್ ಕುಲಕರ್ಣಿ ದತ್ತಾತ್ರೇ ಪಾಟೀಲ್ ಮುಂತಾದ ವಿಪ್ರ ಮುಖಂಡರು ವೇದಿಕೆಯಲ್ಲಿದ್ದರು. ಶ್ರೀ ಗುರು ಗೋವಿಂದ ಭಟ್ಟರ ಕ್ಷೇತ್ರವಾದ ಕಳಸ ಗ್ರಾಮದಲ್ಲಿ ಸಂಜೆ 5:00ಗೆ  ವಿಪ್ರರ ಸಭೆ ನಡೆಯಿತು ಸಭೆಯಲ್ಲಿ ಗೀತಾಸಪ್ತಃ ಸಮಾರೋಪ ಕಾರ್ಯಕ್ರಮ ದೊಂದಿಗೆ ಬ್ರಾಹ್ಮಣರ ಸಂಘಟನೆ ಮತ್ತು ಸದಸ್ಯತ್ವದ ಬಗ್ಗೆ ಮಾತನಾಡಿದೆವು ಮಾನ್ಯ ಅಶೋಕ್ ಹಾರನಹಳ್ಳಿ ಅವರು ರಾಜ್ಯಾಧ್ಯಕ್ಷರಾದ ಮೇಲೆ ಕರ್ನಾಟಕದಲ್ಲಿ ವಿಪ್ರ ಸಂಘಟನೆ ಅತಿ ಹೆಚ್ಚು  ಸಂಘಟನೆ ಯಾಗುತ್ತಿದ್ದು ಮಹಾಸಭಾ ವಿಪ್ರ ಪ್ರಗತಿಯ ಸಲುವಾಗಿ ಹಲವು ಯೋಜನೆಗಳನ್ನು ಸಮಾಜಕ್ಕೆ ಕೊಡಲು ತೀರ್ಮಾನಿಸಿದ್ದು ಈ ಯೋಜನೆಗಳ ಲಾಭಗಳನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ವಿನಂತಿ ಮಾಡಿಕೊಂಡೆವು  ಇದರೊಂದಿಗೆ ಸಮಾಜದ ಏಳಿಗೆಗಾಗಿ ಸದಸ್ಯರಾಗಬೇಕೆಂದು ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ವಿಜಯ್ ನಾಡ ಜೋಶಿ ಮಾತನಾಡಿದೆನು ಸಭೆಯ ಅಧ್ಯಕ್ಷತೆ ವಹಿಸಿದ ಗೋಪಾಲ್ ಗೌಡ ಪಾಟೀಲ್ ಕಳಸದಲ್ಲಿ ಬ್ರಾಹ್ಮಣರು ಹೆಚ್ಚು ಇರುವುದರಿಂದ ಇಲ್ಲಿ ಹೆಚ್ಚು ಸದಸ್ಯರನ್ನು ನಾವು ಮಾಡುತ್ತೇವೆ ಎಂದು ಭರವಸೆ ಕೊಟ್ಟರು ಇನ್ನೊಬ್ಬ ಮಹಾಸಭಾದ ಕಾರ್ಯಕಾರಿ ಸದಸ್ಯರು ಆದ ಶ್ರೀಮತಿ ವೀಣಾ ಹೆಗಡೆ ಮಾತನಾಡಿ ಮಹಿಳೆಯರು ಹೆಚ್ಚು ಸಂಘಟನೆಯಾಗಬೇಕೆಂದು ಕರೆಕೊಟ್ಟರು. ವೇದಿಕೆಯಲ್ಲಿ ಶ್ರೀ ಗೋಪಾಲಕೃಷ್ಣ ಹೆಗಡೆ ಮಾತನಾಡಿ ಗೀತಾಸಪ್ತಹವನ್ನು ಯಶಸ್ವಿಯಾಗಿ ನೆರವೇರಿಸಿದ ವಿಪ್ರರಿಗೆ ಧನ್ಯವಾದಗಳು ತಿಳಿಸಿದರು  ಶ್ರೀ ಅಶೋಕ್ ಪಾಳಂದಿ. ಶ್ರೀ  ಶಾಮಸುಂದ ದೇಸಾಯಿ.. ವಿಪ್ರ ಮುಖಂಡರಾದ ಶ್ರೀ ಗಿರೀಶ್ ದೇಸಾಯಿ ಶ್ರೀಮತಿ ಯಜುರ್ವೇದಿ ಶ್ರೀ ಗೋವಿಂದ ಜೋಶಿ ಯುವಕರು ಮಾತೆಯರು ಪಾಲ್ಗೊಂಡಿದ್ದರು ಸಭೆಯ ಪ್ರಾಸ್ತಾನಿಕ ಮತ್ತು ವಂದನಾರ್ಪಣೆಯನ್ನು ವಿಪ್ರ ಮುಖಂಡರಾದ ಶ್ರೀ ಮುರಳಿಧರ್ ಜೋಷಿ ನೆರವೇರಿಸಿದ. ಬ್ರಹ್ಮ ತೇಜು ಬಲಂ ಬಲಂ. ಗಾಯತ್ರಿ ಮಾತಾ ಕಿ ಜೈ. .ಇದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಘಟನಾ ಪ್ರವಾಸ ವಿವರಣೆ.