ಖಾನಾಪುರದಲ್ಲಿ ಸದಸ್ಯತ್ವ ಅಭಿಯಾನ
ಬೆಳಗಾವಿ ಜಿಲ್ಲೆಯ ಖಾನಾಪುರ ದ ಶ್ರೀರಾಮ ಮಂದಿರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ಅಭಿಯಾನ ಮಾಡಲಾಯಿತು.
ಎಕೆಬಿಎಂಎಸ್ ನ ಕೇಂದ್ರ ಕಾರ್ಯಕಾರಿ ಸಮೀತಿ ಸದಸ್ಯ ವಿಲಾಸ ಜೋಶಿ ಮತ್ತು ಪ್ರಿಯಾ ಪುರಾಣಿಕ ಅವರು ಸಭೆಯಲ್ಲಿ ಉಪಸ್ಥಿರಿದ್ದು ಸಂಘಟನೆ ಬಗ್ಗೆ ಮಾತನಾಡಿದರು.
ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಮಾರ್ಗದರ್ಶನದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಸಭೆಯಲ್ಲಿ ವಿವರಿಸಲಾಯಿತು.
ಆರ್ಥಿಕಚಾಗಿ ಹಿಂದುಳಿದ ಬ್ರಾಹ್ಮಣರ ಬಗ್ಗೆ ವಿಶೇಷ ಮೀಸಲಾತಿ ಮತ್ತು ಭವನ ನಿರ್ಮಿಸುವುದರ ಬಗ್ಗೆ ಅಧ್ಯಕ್ಷರಾದ ಹಾರಹಳ್ಳಿ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೆಟ್ಡಿ ಮಾಡಿದ್ದರ ಬಗ್ಗೆ ಸಭೆಯಲ್ಲಿ ವಿಲಾಸ ಜೋಶಿ ವಿವರಿಸಿದರು.
ಸಭೆಯಲ್ಲಿ ಮಹಾಸಭೆ ಸದಸ್ಯರಾಗಲು ಹೆಚ್ಚಿನ ಆಸಕ್ತಿ ತೋರಿದರು. ಇಂತಹ ಸಂಘಟನಾತ್ಮಕ ಸಭೆಗಳು ಹಿಂದೆ ಆಗಿರಲಿಲ್ಲ .ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಭೆಗಳು ಆಗಲಿ ಎನ್ನುವ ಅಭಿಪ್ರಾಯ ವನ್ನು ಹಾಜರಿದ್ದವರು ವ್ಯಕ್ತಪಡಿಸಿದರು. ಮಾಲತೇಶ ಕುಲಕರ್ಣಿ, ಪ್ರಸನ್ ಕುಲಕರ್ಣಿ,ಅರವಿಂದ ಕುಲಕರ್ಣಿ, ನಾರಾಯಣ ದೇಶಪಾಂಡೆ, ಉದಯ ದೇಶಪಾಂಡೆ, ಪ್ರಭಾಕರ ಭಟ್, ವಿಜಯ ಪಾಟೀಲ, ಶಾರ್ದೂಲ ಜೋಶಿ ಮತ್ತಿತರರು ಉಪಸ್ಥಿತರಿದ್ದರು