OUR FOUNDING PRINCIPLE

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಸ್ಥಾಪನೆ ಮತ್ತುಕಾರ್ಯಚಟುವಟಿಕೆಗಳು ಸಂಘಟನೆ, ಸ್ವಾವಲಂಬನೆ ಮತ್ತು ಸಂಸ್ಕಾರ ಎಂಬ ಮೂರು ಆಧಾರ ಸ್ತಂಭಗಳ ಮೇಲೆ ಸ್ಥಾಪಿತವಾಗಿದೆ.

ಸಂಘಟನೆ - ಕರ್ನಾಟಕದಾದ್ಯಂತ ನೆಲೆಸಿರುವ ತ್ರಿಮತಸ್ಥ ಬ್ರಾಹ್ಮಣರೆಲ್ಲ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಎಂಬ ರಾಜ್ಯ ಮಟ್ಟದ ಸಂಘಟನೆಯಲ್ಲಿ ಒಂದೇ ಸೂರಿನಡಿ ಭಾಗಿಯಾಗಿ ಸಮಸ್ತ ಬ್ರಾಹ್ಮಣ ಸಮುದಾಯವನ್ನು ಪ್ರಸ್ತುತ ಮತ್ತು ಮುಂದೆ ಬರುವ ಸವಾಲುಗಳನ್ನು ಧೈರ್ಯವಾಗಿ ಎದುರಿಸಲು ಸಂಘಟಿಸುವುದು.

ಸ್ವಾವಲಂಬನೆ - ಕರ್ನಾಟಕದ ವಿಪ್ರ ಸಮುದಾಯದ ಪ್ರತಿ ವ್ಯಕ್ತಿಯು ಸ್ವಾವಲಂಭಿ ಜೀವನ ನಡೆಸುವಲ್ಲಿ ಸಹಾಯ ಮಾಡುವುದು.

ಸಂಸ್ಕಾರ - ಶರವೇಗದ ಬದಲಾವಣೆಗೆ ಹೊಂದಿಕೊಂಡಿರುವ ಬ್ರಾಹ್ಮಣ ಸಮಾಜ ಕೆಲವೊಮ್ಮೆ ಹಿರಿಯರಿಂದ ಹಾಗು ಅನಾದಿ ಕಾಲದಿಂದ ಬಂದಂತ ವೈದಿಕ ಪರಂಪರೆಯನ್ನು , ಮಾರ್ಗದರ್ಶಕರ ಕೊರತೆಯಿಂದಾಗಿ , ಸಮಯದ ಕೊರತೆಯಿಂದಾಗಿ , ಆರ್ಥಿಕ ಹಾಗು ಹಲವು ಸಾಮಾಜಿಕ ಸವಾಲುಗಳಿಂದಾಗಿ ಪಾಲಿಸಲಾಗದೆ ಮರುಕ ಪಡುತ್ತಿದ್ದಾರೆ , ಆದ್ದರಿಂದ ವೇದಶಾಸ್ತ್ರಗಳ ಅಧ್ಯಯನಕ್ಕಾಗಲಿ ಅಥವಾ ನಿತ್ಯಕರ್ಮ ಅನುಷ್ಠಾನಕ್ಕಾಗಲಿ, ಅಥವಾ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪೂರಕ ವಾತಾವರಣ ನಿರ್ಮಿಸುವುದು ಕೂಡ ಮಹಾಸಭಾದ ಹೊಣೆ ಎಂದೇ ಭಾವಿಸಿ ಈ ಮೇಲಿನ ಮೂರು ಆಧಾರ ಸ್ತಂಭಗಳ ಮೇಲೆ ಮಹಾಸಭಾದ ಯೋಜನೆಗಳು ಹೊರಹೊಮ್ಮಲಿವೆ .