ದಿನಾಂಕ 14/04/2022 ರಂದು ಪಾಶ್ಚಾಪುರದಲ್ಲಿ ಬ್ರಾಹ್ಮಣ ಸಂಘಟನೆ ಸಭೆ - ಎಕೆಬಿಎಂಎಸ್ ಅಧ್ಯಕ್ಷ ಹಾರನಹಳ್ಳಿ ಕನಸು ನನಸಿಗೆ ಪಣ.ಬ್ರಾಹ್ಮಣರ ಸಂಘಟನೆಗೆ ಹೆಚ್ಚಿನ ಒತ್ತು.ಸದಸ್ಯತ್ವ ಅಭಿಯಾನಕ್ಕೆ ಜೈ ಎಂದ ಸಮಾಜ ಬಾಂಧವರು.ಪಾಶ್ಚಾಪುರದಲ್ಲಿ ಬ್ರಾಹ್ಮಣ ಸಂಘಟನೆ ಸಭೆ - ಎಕೆಬಿಎಂಎಸ್ ಅಧ್ಯಕ್ಷ ಹಾರನಹಳ್ಳಿ ಕನಸು ನನಸಿಗೆ ಪಣ.ಬ್ರಾಹ್ಮಣರ ಸಂಘಟನೆಗೆ ಹೆಚ್ಚಿನ ಒತ್ತು.ಸದಸ್ಯತ್ವ ಅಭಿಯಾನಕ್ಕೆ ಜೈ ಎಂದ ಸಮಾಜ ಬಾಂಧವರು.
ರಾಜ್ಯವ್ಯಾಪಿ ಬ್ರಾಹ್ಮಣ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ಹುಕ್ಕೇರಿ ತಾಲೂಕಿನ ಪಾಶ್ಚಾಪುರದಲ್ಲಿ ಬ್ರಾಹ್ಮಣ ಸಮುದಾಯದವರ ಸಭೆ ನಡೆಸಲಾಯಿತು.ಸಭೆಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಸದಸ್ಯ ವಿಲಾಸ ಜೋಶಿ ಸಂಘಟನೆ ಮತ್ತು ಮಹಾಸಭಾ ಉದ್ದೇಶಗಳನ್ನು ವಿವರಿಸಿದರು.ಅಶೋಕ ಹಾರನಹಳ್ಳಿಯವರು ಮಹಾಸಭಾ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಸಮಾಜ ಗುರುತಿಸುವಂತಹ ಕೆಲಸಗಳು ಆಗುತ್ತಿವೆ. ಈಗ ನಮ್ಮ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮಹಾಸಭಾ ಸದಸ್ಯತ್ವವನ್ನು ಪಡೆದುಕೊಳ್ಳಬೇಕು ಎಂದು ವಿಲಾಸ ಜೋಶಿ ಮನವಿ ಮಾಡಿದರು.ಬೆಳಗಾವಿಯಲ್ಲಿಯೂ ಕೂಡ ಬ್ರಾಹ್ಮಣ ಹೆಸರಾಂತ ಉದ್ದಿಮೆದಾರರ ಸಭೆಯನ್ನು ಎಲ್ಲರ ಸಹಕಾರದಿಂದ ನಡೆಸಲಾಗುತ್ತಿದೆ . ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವುದು ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರಿಗೆ ಯಾವ ರೀತಿ ಸಹಾಯ ಮಾಡಬಹುದು ಎನ್ನುವುದನ್ನು ಸಹ ಸಭೆಯಲ್ಲಿ ಅವರು ವಿವರಿಸಿದರು.ಇದೇ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಬಡ ವಿದ್ಯಾರ್ಥಿಗಳಿಗೆ ಕೊಡಮಾಡುವ EWS ಪ್ರಮಾಣ ಪತ್ರವನ್ನು ಯಾವ ರೀತಿ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆಯೂ ವಿಲಾಸ ಜೋಶಿ ವಿವರಿಸಿದರು.ಬ್ರಾಹ್ಮಣ ಸಂಘಟನೆ ಬಗ್ಗೆ ಅಧ್ಯಕ್ಷರಾದ ಅಶೋಕ ಹಾರನಹಳ್ಳಿಯವರು ಕಂಡ ಕನಸುಗಳನ್ನು ವಿಲಾಸ ಜೋಶಿ ಸಭೆಯಲ್ಲಿ ಬಿಚ್ವಿಟ್ಟರು.ಮೇ ತಿಂಗಳ ಮೊದಲ ವಾರದಲ್ಲಿ ಬೆಳಗಾವಿಗೆ ಆಗಮಿಸುವ ಅಧ್ಯಕ್ಷ ಅಶೋಕ ಹಾರನಹಳ್ಳಿಯವರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಳ್ಳಲಾಯಿತು.
ವಂದನೆಗಳೊಂದಿಗೆ,
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ).