NEWS DETAILS

Image Description

ಬಸವನಗುಡಿ ಬ್ರಾಹ್ಮಣ ಮಹಾ ಸಭಾದಿಂದ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ

ಬಸವನಗುಡಿ ಬ್ರಾಹ್ಮಣ ಮಹಾಸಭಾದ ವತಿಯಿಂದ ಪ್ರತಿಭಾ ಪುರಸ್ಕಾರ , ಸಾಧಕರಿಗೆ ಬಸವನಗುಡಿ ವಿಪ್ರ ರತ್ನ ಪ್ರಶಸ್ತಿ, ಪದಾಧಿಕಾರಿಗಳಿಗೆ ಸನ್ಮಾನ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಮಹಾಸಭಾದ ಅಧ್ಯಕ್ಷ ರಾದ ಶ್ರೀ ಅಶೋಕ್ ಹಾರನಹಳ್ಳಿ ಅವರು ಉದ್ಘಾಟಿಸಿ ಮಾತನಾಡಿ ಇಂತಹ ಕಾರ್ಯಕ್ರಮ ಗಳಿಂದ ವಿಧ್ಯಾರ್ಥಿಗಳು ಸಾಧನೆ ಮಾಡಲು ಉತ್ತೇಜನ ನೀಡಿದಂತಾಗುತ್ತೆ, ಹೆಚ್ಚು ಜನ ಮಹಾಸಭಾದ ಜೂತೆ ಕೈಜೋಡಿಸಿದರೆ ಸಂಘಟನೆಯನ್ನು ಬಲಿಷ್ಠಗೂಳಿಸಬಹುದು ಎಂದು ಹೇಳಿದರು, ಸಭೆಯನ್ನು ಉದ್ದೇಶಿಸಿ ಶಾಸಕರಾದ ಎಲ್. ಎ. ರವಿ ಸುಬ್ರಮಣ್ಯ ಹಾಗೂ  ಉದಯ್ ಗರುಡಾಚಾರ್ ಮಾತನಾಡಿ ಇಂತಹ ಕಾರ್ಯಕ್ರಮಗಳಿಂದ ಉನ್ನತ ಸಾಧನೆ ಮಾಡಲು ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗಲಿದೆ, ಪ್ರಶಸ್ತಿ ಪಡೆದವರು ಸಮಾಜದಲ್ಲಿ ಸಾಧನೆ ಮಾಡಿ ಮಾದರಿ ವ್ಯಕ್ತಿಗಳಾಗಿದ್ದಾರೆ ಎಂದು ತಿಳಿಸಿ ಬ್ರಾಹ್ಮಣ ಸಭಾದ ಕಾರ್ಯಕ್ರಮ ಗಳಿಗೆ ಸಂಪೂರ್ಣವಾಗಿ ಸಹಕಾರ ನೀಡಲಾಗುವುದು ಎಂದು ತಿಳಿಸಿದರು, ಗರುಡಾ ಫೌಂಡೇಷನ್  ನ ಅಧ್ಯಕ್ಷ ರಾದ ಶ್ರೀ ಮತಿ ಮೇದಿನಿ ಗರುಡಾಚಾರ್ , ಮಹಿಳಾ ವಿಭಾಗದ ಸಂಚಾಲಕಿ ಡಾ|| ಶುಭಮಂಗಳ ಸುನಿಲ್, ಮಾಜಿ ಮಹಾಪೌರ ರಾದ ಕಟ್ಟೆ ಸತ್ಯನಾರಾಯಣ ಮಾತನಾಡಿದರು, ಕಾರ್ಯ ದಲ್ಲಿ ಎಂ. ನರಸಿಂಹನ್, ಡಾ|| ಗುರುರಾಜ ಪೋಶೆಟ್ಟಿಹಳ್ಳಿ ಹಾಗೂ ಡಾ|| ಸಂಜನ ಕುಮಾರ್ ಅವರಿಗೆ ಬಸವನಗುಡಿ ವಿಪ್ರ ರತ್ನ ಪ್ರಶಸ್ತಿ ಯನ್ನು ನೀಡಲಾಯಿತು, ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು, ಮಹಾಸಭಾದ ಉಪಾಧ್ಯರಾದ ಡಿ.ವಿ. ರಾಜೇಂದ್ರ ಪ್ರಸಾದ್, ಹೆಚ್. ಆರ್. ಸುರೇಶ್, ಸಹ ಕಾರ್ಯದರ್ಶಿಗಳಾದ ಹೆಚ್.ಸಿ. ಪುರುಷೋತ್ತಮ್, ಟಿ.ಎಲ್.ಎಸ್.ಕುಮಾರ್, ಆರ್.ರವಿಕುಮಾರ್ ಹಾಗೂ ವೆ|| ಬ್ರ|| ಶ್ರೀ ನಾರಾಯಣ ಮೂರ್ತಿ ಅವರನ್ನು ಸನ್ಮಾನಿಸಲಾಯಿತು, ಕಾರ್ಯಕ್ರಮದಲ್ಲಿ NCB ಅಧ್ಯಕ್ಷರಾದ ಹೆಚ್.ಸಿ.ಕೃಷ್ಣ, ಮಹಾಸಭಾದ ಹಿರಿಯರಾದ ಹೆಚ್.ಎನ್.ಹಿರಿಯಣ್ಣ  ಡಿ.ಎಸ್. ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಮೂರ್ತಿ, ಉಪಾಧ್ಯಕ್ಷ ರಾದ ಸಿ.ಕೆ. ರಾಮಮೂರ್ತಿ, ಸಹ ಕಾರ್ಯದರ್ಶಿ ಮುರಳೀಧರ್, 
ಬೆಂಗಳೂರು ಉತ್ತರ ವಲಯ ಸಂಚಾಲಕರಾದ ಎಲ್. ಜಯಸಿಂಹ, ಕಾರ್ಯಕಾರಿಣಿ ಸದಸ್ಯರಾದ ಎಂ.ಆರ್. ಶಿವಶಂಕರ್, ಪಿ.ಆರ್.ಪ್ರಕಾಶ್, ತಾರಾನಾಥ, ಕೆ.ಎನ್.ಸತ್ಯಮೂರ್ತಿ, ನರಸಿಂಹ ಮೂರ್ತಿ, ಹೆಚ್.ಕೆ. ಶ್ರೀ ನಿವಾಸ್, ಅನಂತರಾಮು,   ಸತ್ಯೇಂದ್ರ ಹಾಗೂ ಇತರೆ ಬ್ರಾಹ್ಮಣ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷ ರಾದ ಎಸ್.ಆರ್.ಕೃಷ್ಣಮೂರ್ತಿ ವಹಿಸಿದ್ದರು,ನಿರೂಪಣೆಯನ್ನು ಡಾ|| ನಾಗಲಕ್ಷ್ಮೀ, ಹೆಚ್.ಎಸ್.ಶಂಕರ್ ಪ್ರಸಾದ್ , ಸ್ವಾಗತವನ್ನು ರಥಯಾತ್ರೆಸುರೇಶ್ ಮಾಡಿದರು, ಕಾರ್ಯಕ್ರಮದ ಬಹುತೇಕ ನಿರ್ವಹಣೆ ಯನ್ನು ಯುವ ವಿಭಾಗದ ಸದಸ್ಯರಿಂದ ನಡೆಸಲಾಯಿತು, ಸಂಘದ ಪದಾಧಿಕಾರಿಗಳು ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಲು ಸಹಕರಿಸಿದರು.