NEWS DETAILS

Image Description

ಕಲಬುರಗಿ ಜಿಲ್ಲೆಯ ಜೇವರಗಿ ತಾಲೂಕ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಶ್ರೀ ರಮೇಶ್ ಬಾಬು ವಕೀಲ (ಕುಲಕರ್ಣಿ) ಯವರನ್ನು ಮಹಾಸಭೆಯ ವಲಯ ಉಪಾಧ್ಯಕ್ಷರಾದ ಶ್ರೀ ಶ್ರೀಧರ ಸರಾಫ ಅವರು ಭೇಟಿ ಮಾಡಿ ಮಹಾಸಭೆಯ ಕಾರ್ಯಕ್ರಮಗಳ ಕುರಿತು ವಿವರಿಸಿದರು

ಕಲಬುರಗಿ ಜಿಲ್ಲೆಯ ಜೇವರಗಿ ತಾಲೂಕ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಶ್ರೀ ರಮೇಶ್ ಬಾಬು ವಕೀಲ (ಕುಲಕರ್ಣಿ) ಯವರನ್ನು ಮಹಾಸಭೆಯ ವಲಯ ಉಪಾಧ್ಯಕ್ಷರಾದ  ಶ್ರೀ ಶ್ರೀಧರ ಸರಾಫ ಅವರು ಭೇಟಿ ಮಾಡಿ ಮಹಾಸಭೆಯ ಕಾರ್ಯಕ್ರಮಗಳ ಕುರಿತು ವಿವರಿಸಿದರು.ದಿನಾಂಕ ೧೫.೧೦.೨೦೨೩ ಭಾನುವಾರ ಸದಸ್ಯತ್ವ ನೋಂದಣಿ ಮತ್ತು ವಿಪ್ರನುಡಿ ಕುರಿತು ಜೇವರ್ಗಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಭೆ ಕರೆಯುವದಾಗಿ ತಿಳಿಸಿ ಮಹಾಸಭೆ ಹಮ್ಮಿಕೊಳ್ಳುವ ಎಲ್ಲ ಸಾಮಾಜಿಕ ಚಟುವಟಿಕೆಗಳಿಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.ತಾಲೂಕಿನ ಯುವ ರೈತರು ಮತ್ತು ಮುಖಂಡರಾದ ಶ್ರೀ ಮಲ್ಹಾರರಾವ್ ಕುಲಕರ್ಣಿ  ಎಡ್ರಾಮಿ,ಶ್ರೀ ಲಕ್ಷ್ಮಣ ಕುಲಕರ್ಣಿ,ಹಂಗರಗಾ ಹಾಗೂ ಶ್ರೀ ಪಾಂಡುರಂಗ ಕುಲಕರ್ಣಿ,ಜೇವರಗಿ ಇನ್ನಿತರರು ಉಪಸ್ಥಿತರಿದ್ದರು.