ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಹೊಸಪೇಟೆ:
ಬ್ರಾಹ್ಮಣ ಸಮುದಾಯ ಜನರು ಸಂಘಟಿತರಾಗುವ ಮೂಲಕ ಜೀವನದಲ್ಲಿ ಬರುವ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಲು ಮುಂದಾಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ರಾಜ್ಯ ಸಮಿತಿ ಪ್ರತಿನಿಧಿ ಉಮೇಶ್ ತಿಳಿಸಿದರು.
ನಗರದ ಚಿತ್ತವಾಡ್ಗಿಯ ದತ್ತಾತ್ರೇಯ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ
ಅಖಿಲ ಕರ್ನಾಟಕನ ಬ್ರಾಹ್ಮಣ ಸಭಾ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು. ಮಹಾಸಭಾ ಈಗಾಗಲೇ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಹಂತ ಹಂತವಾಗಿ ಕಾರ್ಯಗತಗೊಳ್ಳಲಿದೆ ಎಂದರು.
ಸಮುದಾಯದ ಎಲ್ಲಾ ಜನರ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಸದಸ್ಯತ್ವ ಅಭಿಯಾನ ಎರಡು ಹಂತದಲ್ಲಿ ಹಮ್ಮಿಕೊಳ್ಳಲಾಗಿದ್ದು ನಗರದ ಪ್ರಮುಖ ಕೇಂದ್ರಗಳಲ್ಲಿ ನಡೆಸಲಾಗುವುದು.
ಈ ಸಂದರ್ಭದಲ್ಲಿ ಚಿತ್ತವಾಡ್ಗಿ ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀನಿವಾಸ, ದತ್ತಜಯಂತಿ ಆಚರಣೆ ಸಮಿತಿ ರವೀಂದ್ರ, ಹಿರಿಯ ಮುಖಂಡ ರಂಗೋಪAತ್ ನಾಗರಾಜ್, ಧಾರ್ಮಿಕ ಪರಿಷತ್ ಮುಖಂಡ ಅನಿಲ್ ಜೋಶಿ, ವಕೀಲ ಕಲ್ಲಂಭಟ್ ಸೇರಿದಂತೆ ಇತರರಿದ್ದರು.
ಎಚ್‌ಪಿಟಿ೧೭೦೧
ಹೊಸಪೇಟೆ ಚಿತ್ತವಾಡ್ಗಿ ಶ್ರೀದತ್ತಾತ್ರೇಯ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಗುರುವಾರ ಹಮ್ಮಿಕೊಳ್ಳಲಾಗಿತ್ತು.