NEWS DETAILS

Image Description

ಕಲಬುರಗಿಯ ವಿದ್ಯಾರ್ಥಿಗೇ ನೆರವು

ಕಲಬುರಗಿಯ ಕೆಲವು ಬ್ರಾಹ್ಮಣ ಗಣ್ಯರು,ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ  ಕಲಬುರಗಿ ವಲಯ ಉಪಾಧ್ಯಕ್ಷರನ್ನು ಸಂಪರ್ಕಿಸಿ ಕಲಬುರಗಿಯ ಪ್ರತಿಭಾನ್ವಿತ ವಿದ್ಯಾರ್ಥಿ ಚಿ. ಶ್ರೀಶ ಕುಲಕರ್ಣಿ ಇತ್ತೀಚೆಗೆ ತನ್ನ ತಂದೆಯನ್ನು ಕಳೆದುಕೊಂಡು,ತನ್ನ ತಾಯಿಯ ಅಲ್ಪ ಸ್ವಲ್ಪ ಆದಾಯದಲ್ಲೇ ಇಡೀ ಕುಟುಂಬವೇ ಸಂಕಷ್ಟದಲ್ಲಿರುವದರ ಕುರಿತು ವಿವರಿಸಿ,ಆತನ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಕಾಲೇಜು ದಾಖಲಾತಿ ಶುಲ್ಕ ಪಾವತಿಸಲು ಸಾಧ್ಯವಾದ ಧನ ಸಹಾಯವನ್ನು ಮಹಾಸಭೆಯ ವತಿಯಿಂದ ನಿರೀಕ್ಷಿಸುವದಾಗಿ ಉಪಾಧ್ಯಕ್ಷರನ್ನು ಖುದ್ದಾಗಿ ಭೇಟಿ ಮಾಡಿ ತಿಳಿಸುತ್ತಾರೆ. 

ಇಷ್ಟು ದೊಡ್ಡ ಮೊತ್ತವನ್ನು ಒಬ್ಬ ವಿದ್ಯಾರ್ಥಿಗೇ ಅನ್ವಯಿಸಿ ಕೊಡಮಾಡುವ  ಯಾವುದೇ ಯೋಜನೆ ಮಹಾಸಭೆಯ ಮಿತಿಯಲ್ಲಿ ಇರುವದಿಲ್ಲ ಅನ್ನುವದನ್ನು ಅರಿತುಕೊಂಡು,ವಲಯದ ಉಪಾಧ್ಯಕ್ಷರು ಆ ವಿದ್ಯಾರ್ಥಿಗೆ ಹೇಗಾದರೂ ಸಹಾಯ ಕಲ್ಪಿಸುವ ನಿರ್ಧಾರ ಮಾಡಿ ಶ್ರೀ ವಿವೇಕ್ ಕಣ್ಣನ್ (ಮೂಲತಃ ಕೇರಳದವರು,ಹುಟ್ಟಿ ಬೆಳೆದದ್ದು ಕಲಬುರಗಿಯಲ್ಲೇ) ಅವರ ತಾಯಿ ಶ್ರೀಮತಿ ಪದ್ಮಿನಿ ಕಣ್ಣನ್ ಅವರು ತಮ್ಮ ತಂದೆ ಶ್ರೀ ಜಿ. ಕಣ್ಣನ್ ಅವರ ಸ್ಮರಣಾರ್ಥ ಸ್ವಇಚ್ಚಯಿಂದ ನೀಡಿರುವ ರೂಪಾಯಿ ೫೧,೦೦೦/- ಗಳನ್ನು ಕಳೆದ ಆಗಸ್ಟ್ಮ ೨೭ರಂದು ಮಹಾಸಭೆಯ ವತಿಯಿಂದ ನಡೆದ ಕಲಬುರಗಿ ವಲಯದ ೨೦೨೩ ಬ್ರಾಹ್ಮಣ ಬ್ಯುಸಿನೆಸ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯ ತಾಯಿ ಪದ್ಮಾ ಕುಲಕರ್ಣಿಯವರಿಗೆ ವಾಗ್ದಾನ ಪತ್ರ ನೀಡಿರುತ್ತಾರೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ವಿದ್ಯಾರ್ಥಿಯು ಪ್ರವೇಶಾತಿ ಪಡೆದಿದ್ದಾನೆ ಎಂದು ತಿಳಿಸಲು ಹರ್ಷವೆನಿಸುತ್ತದೆ.ಸಮಸ್ಯೆಯ ಗಂಭೀರತೆಗೆ ಸಕಾಲದಲ್ಲಿ ಸ್ಪಂದಿಸಿ ಈ ನೇರನಿಧಿಯನ್ನು ಸಂಗ್ರಹಿಸಿ ಒಬ್ಬ ವಿಪ್ರ ವಿದ್ಯಾರ್ಥಿಯ ಭವಿಷ್ಯಕ್ಕೆ ಸಹಕರಿಸಿದ ಉಪಾಧ್ಯಕ್ಷರ ಕಾರ್ಯ ಸ್ಪೂರ್ತಿದಾಯಕವೂ ಮತ್ತು ಶ್ಲಾಘನೀಯವೂ ಆಗಿದೆ.