ಸಾರಸ್ವತ ಲೋಕದ ವಿದ್ವತ್ ಮುಕುಟ "ಶತಾವಧಾನಿ ಆರ್.ಗಣೇಶ್" ಅವರಿಗೆ ಗೌರವ ಡಾಕ್ಟರೇಟ್:
ದಿನಾಂಕ 07/03/2024 ರಂದು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಪ್ರಥಮ ಘಟಿಕೋತ್ಸವದಲ್ಲಿ ಮಾನನೀಯ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಶತಾವಧಾನಿ ಡಾ. ರಾ. ಗಣೇಶ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದರು . ನಮ್ಮ ರಾಜ್ಯದ ಹೆಮ್ಮೆ, ನಮ್ಮ ದೇಶದ ಆಸ್ತಿ ವಿದ್ವತ್ ಲೋಕದ ವಿಸ್ಮಯ ಎಂದೇ ಹೆಸರಾಗಿರುವ ಶತಾವಧಾನಿ ಡಾ. ರಾ. ಗಣೇಶ್ ಅವರಿಗೆ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಪ್ರಥಮ ಘಟಿಕೋತ್ಸವದಲ್ಲಿಯೇ ಈ ಗೌರವ ಸಂದಿರುವುದು ಒಂದಿಡೀ ಸಾರಸ್ವತ ಲೋಕವೇ ಹೆಮ್ಮೆ ಪಡುವಂತಾಗಿದೆ, ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಡಾ. ಶತಾವಧಾನಿ ಡಾ. ರಾ. ಗಣೇಶ್ ಅವರನ್ನು ತುಂಬು ಹೃದಯದಿಂದ ಅಭಿನಂದಿಸುತ್ತಿದೆ.
ಅಲ್ಲದೆ ಈ ಸಂಧರ್ಭದಲ್ಲಿ ಗೌರವ ಡಾಕ್ಟರೇಟ್ ಪಡೆದುಕೊಂಡ ಪ್ರೊಫೆಸರ್ ಪಿ . ಕೆ . ಮಾಧವನ್ (ಕೇರಳ) ಪ್ರೊಫೆಸರ್ ಲೀನಾ ರಸ್ತೋಗಿ (ಮಹಾರಾಷ್ಟ್ರ)ಪ್ರೊಫೆಸರ್ ಗಯಾ ಚರಣ್ ತ್ರಿಪಾಠಿ (ಉತ್ತರ ಪ್ರದೇಶ) ಹಾಗು ಪ್ರೊಫೆಸರ್ ದೇವಿಸಹಾಯ ಪಾಂಡೆ (ಉತ್ತರ ಪ್ರದೇಶ) ಇವರೆಲ್ಲರನ್ನು ಮಹಾಸಭೆ ತುಂಬು ಹೃದಯದಿಂದ ಅಭಿನಂದಿಸುತ್ತಿದೆ .