ಮಾನ್ಯ ಶ್ರೀ ಅಶೋಕ್ ಹಾರ್ನಳ್ಳಿ.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ) ಬೆಂಗಳೂರು ಇವರಿಗೆ. ದಿನಾಂಕ 6-8-23 ರಂದು ನಡೆದ ಕಾರ್ಯಕ್ರಮ ವಿವರಣೆ ಗದಗ್ ಜಿಲ್ಲೆಯ ಗದಗ್ ತಾಲೂಕಿನ ಮುಳುಗುಂದ್ ಗ್ರಾಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ) ಬೆಂಗಳೂರು ಹಾಗೂ ಬ್ರಾಹ್ಮಣ ಸೇವಾ ಸಂಘ,,(ರಿ) ಮುಳುಗುಂದ ಇವರ ಸಯುಕ್ತ ಆಶ್ರಯದಲ್ಲಿ ಶ್ರೀರಾಮ ತಾರಕ ಹೋಮ ಹಾಗೂ ಅಧಿಕಮಾಸದ ಕಾರ್ಯಕ್ರಮಗಳು. ಮಾತೆಯರಿಂದ ಉಡಿ ತುಂಬುವ ಕಾರ್ಯಕ್ರಮ ಅದಿಕ ಮಾಸದ 33 ಹಾಡು ಹಾಡುವುದರೊಂದಿಗೆ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಅತಿ ವಿಜುಂಬಳೆಯಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪ್ರಲ್ಹಾದ್ ದೊಡ್ಡವಾಡ ವಹಿಸಿದ್ದರು ಮುಖ್ಯ ಅತಿಥಿಗಳಾಗಿ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸವಾದ ರಾಜ್ಯ ಸಂಘಟನಾ ಕಾರ್ಯದರ್ಶಿ ವಿಜಯ ನಾಡ ಜೋಶಿ ಆಗಮಿಸಿ ಬ್ರಾಹ್ಮಣರ ಏಳಿಗೆ ಮತ್ತು ಸದಸ್ಯತ್ವದ ಬಗ್ಗೆ ಶ್ರೀ ಅಶೋಕ್ ಹಾರನಹಳ್ಳಿ ಹಾಗೂ ಶ್ರೀ ಹಿರಿಯಣ್ಣಸ್ವಾಮಿ ಇವರ ಅವಿರಿತ ಶ್ರಮದಿಂದ ಬ್ರಾಹ್ಮಣ ಸಮಾಜ ಸಂಘಟನೆಯಾಗುತ್ತಿದ್ದು ಇನ್ನೂ ಹೆಚ್ಚು ಹೆಚ್ಚು ಜನರು ಸದಸ್ಯರಾಗಬೇಕೆಂದು ವಿನಂತಿಸಿದರು ವೇದಿಕೆ ಮೇಲೆ ಶ್ರೀ ನಾರಾಯಣರಾವ್ ಐ ಎನ್ ಜಿ. ವೆಂಕಟಾಪುರ ವೆಂಕಟೇಶ್ವರ ದೇವಸ್ಥಾನದ ಛೇರ್ಮನರಾದ ಶ್ರೀ ಅನಂತ ನಾಯಕ್ ತಮ್ಮಣ್ಣವರ್. ಶ್ರೀಮತಿ ಉಡುಪಿ. ವಿಡಿಎಸ್‌ಟಿ. ಗದಗ್ ಕಾಲೇಜಿನ ಪ್ರಾಚಾರ್ಯರು ಉಪಸ್ಥಿತರಿದ್ದರು ಕಾರ್ಯಕ್ರಮ ನಿರೂಪಣೆಯನ್ನು ಕಿರಣ್ ಕುಮಾರ್ ಕುಲಕರ್ಣಿ ಮಾಡಿದರು ಶ್ರೀ ರಾಘವೇಂದ್ರ ಕುಂಬಾರಗಿರಿ ಸ್ವಾಗತಿಸಿದರು ಶ್ರೀ ರಾಜು ಪೂಣವಂತ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಯುವ ವಿಪ್ರರು ಹಾಗೂ ಮಾತೆಯರು ವಿಪ್ರ ಪ್ರಮುಖರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು