Download the invitation for Viswamitra Event

View Invitation

Download the invitation for Business Conclave

View Invitation

ಅಧ್ಯಕ್ಷರ ನುಡಿ

ವಿಪ್ರಬಾಂಧವರಿಗೆ ನಮಸ್ಕಾರಗಳು,

ನಾಡಿನ ಸಮಸ್ತ ವಿಪ್ರ ಭಾಂದವರಿಗೆ ಗೌರಿ ಗಣೇಶ ಹಬ್ಬದ ಹರ‍್ದಿಕ ಶುಭಾಶಯಗಳು , ಗೌರಿ ಗಣೇಶ ಹಬ್ಬದೊಂದಿಗೆ ಸಾಲು ಸಾಲು ಹಬ್ಬದ ವಾತಾವರಣಕ್ಕೆ ನಾಡು ತನ್ನನ್ನ ತಾನು ಸಿದ್ಧಗೊಳಿಸುತ್ತಿದೆ , ಆ ಮೂಲಕ ಸದಾ ದುಡ್ಡು , ಕರ‍್ತಿ ಭವಿಷ್ಯವೆಂದು ಲೌಕಿಕ ವಿಷಯಗಳ ಹಿಂದೆಯೇ ಓಡುವ ಮಾನವ ಸಹಜ ಸ್ವಭಾವಕ್ಕೆ ಒಂದಿಷ್ಟು ವಿರಾಮ ಕೊಟ್ಟು ಮನಸ್ಸು ಭಗವಂತನೆಡೆಗೆ ಕೇಂದ್ರೀಕರಿಸಲು ಹಬ್ಬಗಳು ಸದವಕಾಶವನ್ನು ಕಲ್ಪಿಸಿಕೊಡುತ್ತದೆ , ಆ ಮೂಲಕ ಹಿರಿಯರು , ಕಿರಿಯರು ಎಂಬ ಭೇದ ಭಾವವಿಲ್ಲದೆ ಎಲ್ಲರೂ ಸಂತಸ ಸಂಭ್ರಮದ ಕ್ಷಣಗಳಲ್ಲಿ ಭಾಗವಹಿಸಿ ಮನಸ್ಸು ಪ್ರಫುಲ್ಲಗೊಳಿಸಲು ವೇದಿಕೆಯನ್ನು ಕಲ್ಪಿಸಿಕೊಡುತ್ತದೆ , ಹೀಗೆ ಹಬ್ಬ ಹರಿದಿನಗಳಿಗೆ ರೀತಿ ರಿವಾಝುಗಳಿಗೆ ತನ್ನದೇ ಆದ ಮಹತ್ವ ಹಾಗು ಪ್ರಾತಿನಿಧ್ಯತೆಯಿದೆ..

ಆದರೆ ಇತ್ತೀಚಿನ ದಿನಗಳಲ್ಲಿ ದಿನಗಳಲ್ಲಿ ಅದೇಕೋ ಬ್ರಾಹ್ಮಣರ ಬಗ್ಗೆ ಹಾಗು ಸನಾತನ ರ‍್ಮದ ಬಗ್ಗೆ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ , ಕೆಲವರಂತೂ ಸನಾತನ ರ‍್ಮವನ್ನೇ ನರ‍್ಮೂಲನೆ ಮಾಡುತ್ತೇವೆಂದು ವಿವೇಚನಾರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಆದರೆ ಈ ರೀತಿಯ ಹೇಳಿಕೆ ನೀಡುತ್ತಿರುವವರು ಒಂದಂಶವನ್ನು ಗಮನದಲ್ಲಿಡಬೇಕು .ಸನಾತನ ರ‍್ಮವನ್ನು ನರ‍್ಮೂಲನೆ ಮಾಡಬೇಕೆಂದು ಹೊರಟವರೆಲ್ಲ ತಾವೇ ನರ‍್ಮೂಲನೆಗೊಂಡಿದ್ದರೆ ಏಕೆಂದರೆ ಯಾವುದು ಸತ್ಯವೋ ಅದಕ್ಕೆ ನಾಶವಿಲ್ಲ ಹಾಗು ಸನಾತನ ರ‍್ಮವು ಸತ್ಯವನ್ನು ಅರಸುವ ಮರ‍್ಗ ಆದ್ದರಿಂದ ಸನಾತನ ರ‍್ಮವೆಂಬುವುದು ಎಂದಿಗೂ ಅಮರ ಹಾಗು ನಾಶವಾಗಲಾರದ್ದು.

ಇತಿಹಾಸದ ಉದ್ದಕ್ಕೂ ಸನಾತನ ರ‍್ಮದ ಮೇಲೆ ದೇಶದ ಮೇಲೆ ಪರಕೀಯರ ಆಕ್ರಮಣ ನಡೆಯುತ್ತಲೇ ಬಂದಿದೆ ಆ ರೀತಿಯ ಆಕ್ರಮಣ ವಾದಾಗಲೆಲ್ಲ ಒಬ್ಬ ಶಿವಾಜಿ , ಒಬ್ಬ ಬಾಜಿರಾವ್ ಭರತ ಭೂಮಿಯ ಹಾಗು ಸನಾತನದ ರ‍್ಮದ ಶ್ರೀ ರಕ್ಷೆಗೆ ಟೊಂಕ ಕಟ್ಟಿ ನಿಂತ ಹಲವಾರು ಪ್ರಸಂಗಗಳಿವೆ. ಈ ದೇಶವನ್ನು ಹಾಗು ಸನಾತನ ರ‍್ಮವನ್ನು ಪರಕೀಯರು ನಾನಾ ವಿಧವಾಗಿ ಪೀಡಿಸಿ ಹಿಂಸಿಸಿ ನಾಶಗೊಳಿಸುವ ಪ್ರಯತ್ನ ಪಟ್ಟರು ದೇಶದ ಐಕ್ಯಮತ ಉಳಿದಿರುವುದು ಯಾವ ಒಂದು ರಾಜಕೀಯ ಪ್ರಯತ್ನದಿಂದಲ್ಲ.ಈ ದೇಶ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಐಕ್ಯಮತದಲ್ಲಿರಲು ಕಾರಣ ನಮ್ಮ ಸನಾತನ ರ‍್ಮ ಮತ್ತು ಸಾಂಸ್ಕೃತಿಕ ಪರಂಪರೆ ಹಾಗು ಮಹಾ ಪುರುಷರ ತಪಸ್ಸಿನಿಂದ. ಈ ದೇಶ ಧರ‍್ಮಿಕವಾಗಿ , ಆಧ್ಯಾತ್ಮಿಕವಾಗಿ ಒಂದು ರಾಷ್ಟ್ರ ಎಂಬುದನ್ನು ತೋರಿಸಿಕೊಟ್ಟವರು ಶ್ರೀ ಶಂಕರಾಚರ‍್ಯರು ಎಂಬುದನ್ನು ಸನಾತನ ರ‍್ಮದ ವಿರುದ್ಧ ಹೇಳಿಕೆ ನೀಡುತ್ತಿರುವವರು ಗಮನಿಸಬೇಕಾದ ಸಂಗತಿ , ಅದಲ್ಲದೆ ಹಿಂದೆಲ್ಲ ಪರಕೀಯರು ನಮ್ಮ ಮೇಲೆ ನಮ್ಮ ಸಂಸ್ಕೃತಿಯ ಆಚಾರ ವಿಚಾರಗಳ ಮೇಲೆ ದಾಳಿ ನಡೆಸುತ್ತಿದ್ದರು ಆದರೆ ವಿರ‍್ಯಾಸವೆಂದರೆ ಇಂದು ದಾಳಿ ನಡೆಸುತ್ತಿರುವವರು ನಮ್ಮವರೇ ಆದ್ದರಿಂದ ಹಿಂದೆಂದಿಗಿಂತಲೂ ಇಂದು ನಾವುಗಳು ಮಹಾಸಭೆಯ ಧ್ಯೇಯಗಳಲ್ಲಿ ಒಂದೊಂದ ಸಂಸ್ಕಾರಕ್ಕೆ ಹೆಚ್ಚಿನ ಮಹತ್ವಕೊಡಬೇಕಾಗಿದೆ ಈ ನಿಟ್ಟಿನಲ್ಲಿ ಹಿರಿಯರು ನಮ್ಮ ಮಕ್ಕಳಲ್ಲಿ ಬಾಲ್ಯದಿಂದಲ್ಲೇ ಸನಾತನ ರ‍್ಮದೆಡೆಗೆ ಒಲವು ಮೂಡುವ ರ‍್ಮದ ಜ್ಞಾನವನ್ನು ಪಸರಿಸುವ ತಿಳಿ ಹೇಳುವ ಕರ‍್ಯಕ್ರಗಳನ್ನು ಹೆಚ್ಚು ಹೆಚ್ಚು ಹಮ್ಮಿ ಕೊಳ್ಳಬೇಕು ಆ ಮೂಲಕ ಸನಾತನ ರ‍್ಮದ ಮೇಲೆ ವಾಗ್ದಾಳಿಗಳಾದಾಗ ಸರ‍್ಥವಾಗಿ ಎದುರಿಸಿ ಉತ್ತರ ಕೊಡುವ ವೀರ ಸನಾತನಿಗಳನ್ನು ನರ‍್ಮಿಸುವ ಹೊಣೆ ನಮ್ಮೆಲ್ಲ ವಿಪ್ರ ಭಾಂದವರ ಮೇಲೆ ತುಸು ಹೆಚ್ಚೇ ಇದೆ ಎಂಬುದು ಮರೆಯಬಾರದು.

ಈ ಎಲ್ಲ ಅಂಶಗಳನ್ನು ಮನಗೊಂಡು ಇದಕೆಲ್ಲ ಉತ್ತರ ಸಂಘಟನೆ ಒಂದೇ ಎಂದು ಅರಿತುಕೊಂಡು ಮಹಾಸಭೆಯ ಧ್ಯೇಯಗಳಲ್ಲಿ ಒಂದಾದ ಸಂಘಟನೆಗೆ ಹೆಚ್ಚಿನ ಒತ್ತನ್ನು ಕೊಟ್ಟು ಕಳೆದ ತಿಂಗಳಲ್ಲಿ ಉತ್ತರ ರ‍್ನಾಟಕದ ಸಂಘಟನಾ ಪ್ರವಾಸವನ್ನು ಕೈಗೊಂಡಿದ್ದೆವು , ಹಲವಾರು ಪದಾಧಿಕಾರಿಗಳು ತಮ್ಮ ಕೆಲಸದ ಒತ್ತಡಗಳ ನಡುವೆಯೂ ಮೂರು ದಿವಸಗಳ ಈ ಸಂಘಟನಾ ಪ್ರವಾಸದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದುವಿಶೇಷವಾಗಿತ್ತು,ಬೆಂಗಳೂರಿನಿಂದ ಹೊರಟು ಹಂಪಿ ಗ್ರಾಮಕ್ಕೆ ಭೇಟಿಕೊಟ್ಟು ಅಲ್ಲಿಯ ವಿಪ್ರರ ಕೆಲವು ಸಮಸ್ಯೆಗಳನ್ನು ಆಲಿಸಿ ಈಗಾಗಲೇ ಕಾನೂನಾತ್ಮಕವಾಗಿ ಕೈಗೊಂಡ ಕ್ರಮಗಳನ್ನು ಅವರಿಗೆ ತಿಳಿಸಿ ಅಲ್ಲಿಂದ ಮರು ದಿನ ಇಳ್ಕಲ್ ಪಟ್ಟಣಕ್ಕೆ ಭೇಟಿ ಕೊಟ್ಟು ಅಲ್ಲಿಯ ಸ್ಥಳೀಯ ಮುಖಂಡರನ್ನು ಭೇಟಿ ಮಾಡಿ ಸಭೆಯನ್ನುದ್ದೇಶಿಸಿ ಮಾತನಾಡಿ ಅದೇ ದಿನ ಬಾಗಲಕೋಟೆಯಲ್ಲಿ ಜರುಗಿದ ಪ್ರತಿಭಾ ಪುರಸ್ಕಾರ ಕರ‍್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸಂಘಟನಾ ಸಭೆಯಲ್ಲೂ ಪಾಲ್ಗೊಳ್ಳಲಾಯಿತು.

ಅದಾದ ನಂತರ ಅಂದು ಸಂಜೆ ಬಿಜಾಪುರದಲ್ಲಿ ಆಯೋಜಿಸಿದ್ದ ಬೃಹತ್ ಸಭೆಯಲ್ಲಿ ಪಾಲ್ಗೊಂಡಿದ್ದು ಒಂದು ಅಪರ‍್ವ ಅನುಭವ , ನೆರದಿದ್ದ ಜನೋತ್ಸಮದಲ್ಲಿ ಇದ್ದ ಉತ್ಸಾಹ ಆಯೋಜಕರಲ್ಲಿ ವಿಪ್ರ ಸಮಾಜದ ಬಗ್ಗೆ ಇದ್ದ ಕಳಕಳಿ ಎದ್ದು ಕಾಣುತಿತ್ತು , ಸಭೆಯ ನಂತರ ಮರುದಿನ ಸರಿ ಸುಮಾರು ಹತ್ತಕ್ಕೂ ಹೆಚ್ಚು ವಿಪ್ರ ಸಂಘ ಸಂಸ್ಥೆಗಳನ್ನು ಭೇಟಿ ಮಾಡಿ ಅವರ ಅಭಿಪ್ರಾಯವನ್ನು ಸಂಗ್ರಹಿಸಲಾಯಿತು. ಬಿಜಾಪುರದಿಂದ ಅನತಿ ದೂರದಲ್ಲಿರುವ ಲೋಕಾಪುರ ಗ್ರಾಮದ ವಿಪ್ರ ಸಮಾಜದ ಭೇಟಿಯು ಮಹತ್ತರವಾದದ್ದು ಲೋಕಾಪುರದಂತ ಪುಟ್ಟ ಗ್ರಾಮ, ಇರುವ ಬೆಳಣಿಕೆಯಷ್ಟು ವಿಪ್ರರೆಲ್ಲರೂ ಸೇರಿ ಕಟ್ಟಲು ಉದ್ದೇಶಿಸಿರುವ ಸಮುದಾಯ ಭವನ ಹೀಗೆ ನಾನಾ ಯೋಜನೆಗಳು ಅವರ ಕುಂದು ಕೊರತೆಗಳು ಎಲ್ಲವೂ ವಿಪ್ರ ಸಮಾಜದ ಸಂಘಟನೆಯ ಅವಶ್ಯಕೆತೆಯನ್ನು ಇಡೀ ರಾಜ್ಯಕ್ಕೆ ಸಾರಿ ಹೇಳುವಂತಿತ್ತು.

ಬಿಜಾಪುರದ ಭೇಟಿ ಸಂಘಟನಾ ದೃಷ್ಟಿಯಿಂದ ಒಂದು ಬಗೆಯದಾದರೆ , ಕನ್ನೂರಿನ ಶ್ರೀ ಸರ‍್ಥ ಸದ್ಗುರು ಗಣಪತರಾವ್ ಮಹಾರಾಜರ ದಿವ್ಯ ಕ್ಷೇತ್ರ ಭೇಟಿ , ನಿಂಬಾಳದ ಶ್ರೀ ಗುರುದೇವ ರಾನಡೆ ಅವರ ಆಧ್ಯಾತ್ಮ ಭವನದ ಭೇಟಿ , ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಶಿವೈಕ್ಯರಾದ ಜ್ಞಾನಯೋಗಾಶ್ರಮದ ಭೇಟಿ ಹಾಗು ಲೋಕಾಪುರದ ಶ್ರೀ ಕ್ಷೇತ್ರ ಜ್ಞಾನೇಶ್ವರ ಮಠದ ಭೇಟಿ ನಮ್ಮೆಲರ ಚಿಂತನೆಗಳು ಯೋಚನೆಗಳು ಇನ್ನಷ್ಟು ಅಧ್ಯಾತ್ಮದತ್ತ ಹೊರಳಲು ಅನುವು ಮಾಡಿ ಕೊಟ್ಟಿತು ಎಂದರೆ ತಪಿಲ್ಲ.

ಅದಲ್ಲದೆ ಈ ಹಿಂದೆಯೇ ತಿಳಿಸಿದಂತೆ ಬೆಂಗಳೂರು ಮಹಾನಗರದ ಸಂಘಟನೆ ಹಲವಾರು ಕಾರಣಗಳಿಗೆ ಮಹತ್ವವಾದದ್ದು ಆದ್ದರಿಂದ ಮುಂದಿನ ದಿನಗಳಲ್ಲಿ ಬೆಂಗಳೂರು ನಗರದಾದ್ಯಂತ ಕ್ಷೇತ್ರ ಸಂಘಟಕರನ್ನು ನೇಮಿಸಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಈ ನಿಟ್ಟಿನಲ್ಲಿ ಈಗಾಗಲೇ ರೂಪು ರೇಷೆಗಳು ಸಿದ್ದವಾಗಿದ್ದು ಹಂತ ಹಂತವಾಗಿ ಕರ‍್ಯರೂಪಕ್ಕೆ ಬರಲಿದೆ , ಆದ್ದರಿಂದ ಮುಂದಿನ ದಿನಗಳಲ್ಲಿ ಉತ್ಸಾಹಿ ಯುವಕರು, ಹಿರಿಯರು ಹಾಗು ಕಿರಿಯರು ಮಹಾಸಭೆಯೊಂದಿಗೆ ಹೆಚ್ಚಿನ ಮಟ್ಟದಲ್ಲಿ ಕೈ ಜೋಡಿಸಬೇಕೆಂದು ಅಶಿಸ್ತುತ್ತೇನೆ , ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು ವಿವರಗಳೊಂದಿಗೆ ಭೇಟಿಯಾಗೋಣ.

ಶ್ರೀ ಅಶೋಕ ಹಾರನಹಳ್ಳಿ
ಮಹಾಸಭಾಧ್ಯಕ್ಷರು - ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ