ಜ್ಯೋತಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಕೃಷ್ಣ ಯಜುರ್ವೇದ ಕನ್ನಡ ಪ್ರಕಾಶನ 13 ನೇ ಸಂಪುಟದ ಬಿಡುಗಡೆ ಸಮಾರಂಭ ಬೆಂಗಳೂರು ಶ್ರೀ ಶೃಂಗೇರಿ ಶಂಕರ ಮಠದ ಆವರಣದಲ್ಲಿ ದಿನಾಂಕ 17-05-2022 ರ ಮಂಗಳವಾರ ಸಂಜೆ 05-00 ಗಂಟೆಗೆ ಜರುಗಿತು,
ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರಿಂದ ಗ್ರಂಥದ ಬಿಡುಗಡೆ ನಡೆಯಿತು ಹಾಗೂ ನಂತರ ಜಗದ್ಗುರುಗಳು ಆಶೀರ್ವಚನ ನೀಡಿದರು,
ಕಾರ್ಯಕ್ರಮ ದಲ್ಲಿ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿಗಳಾದ ಗುರುಸೇವಾ ಧುರೀಣ ಪದ್ಮಶ್ರೀ ಡಾ|| ವಿ. ಆರ್. ಗೌರೀಶಂಕರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಾದ ಶ್ರೀ ಅಶೋಕ್ ಹಾರನಹಳ್ಳಿ ಹಾಗೂ ಟ್ರಸ್ಟಿ ಎಂ. ನರಸಿಂಹನ್ ಭಾಗವಹಿಸಿದ್ದರು,
ಕಾರ್ಯಕ್ರಮ ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.