NEWS DETAILS

Image Description

ಹಿಂದೂಗಳನ್ನು ಒಗ್ಗೂಡಿಸುವ ಹೊಣೆ ಬ್ರಾಹ್ಮಣ ರ ಮೇಲಿದೆ

ಸಹಬಾಳ್ವೆ, ಸೌಹಾರ್ದತೆಯಿಂದ ಎಲ್ಲಾ ಸಮುದಾಯಗಳು ಮುನ್ನಡೆದರೆ ಬಲಿಷ್ಠ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದು ಅಬಕಾರಿ ಸಚಿವ ಗೋಪಾಲಯ್ಯ ನುಡಿದರು.

 ಭಾನುವಾರ ನಗರದ ಮಹಾಲಕ್ಷ್ಮೀಪುರ ಬಡಾವಣೆಯ ಬ್ರಾಹ್ಮಣ ಸಭಾದ 18ನೇ ವಾರ್ಷಿಕೋತ್ಸವ  ಸಮಾರಂಭ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವರು  ಮಾತನಾಡಿದರು. 

ಧಾರ್ಮಿಕ ಚಿಂತನೆಗಳಿಂದ ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯ. ಪೂಜೆ, ಹಾಗೂ ಧಾರ್ಮಿಕ ಚಿಂತನೆಗಳಿಂದ ಮನಸ್ಸಿಗೆ ಮಾನಸಿಕ ನೆಮ್ಮದಿ ಸಿಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ  ಅಶೋಕ ಹಾರನಹಳ್ಳಿ ಮಾತನಾಡಿ, ಸನಾತನ ಧರ್ಮ ಅನೇಕ ಮಹನೀಯರ ತ್ಯಾಗದ ಮೇಲೆ ನಿಂತಿದೆ.ಅಖಂಡ ಹಿಂದೂ ಸಮಾಜವನ್ನು ಒಗ್ಗೂಡಿಸುವ ಜವಾಬ್ದಾರಿ ಬ್ರಾಹ್ಮಣ ಸಮಾಜದ ಮೇಲಿದೆ. ಆ ನಿಟ್ಟಿನಲ್ಲಿ ಸಮುದಾಯ ಭಿನ್ನ  ಬೇಧಗಳನ್ನು ಮರೆತು ಒಂದಾಗಬೇಕು ಎಂದು ಕರೆ ನೀಡಿದರು.

ಮಹಾಲಕ್ಷ್ಮೀಪುರ ಬ್ರಾಹ್ಮಣ ಸಭಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವ ಮೂಲಕ ಸಮುದಾಯದ ಹಿತರಕ್ಷಣೆಗೆ ಬದ್ಧವಾಗಿರುವುದು ಶ್ಲಾಘನೀಯ. ವೇದ ಪಠಣ, ಪೂಜೆ  ಪುನಸ್ಕಾರಗಳನ್ನು ಅಳವಡಿಸಿಕೊಂಡು ಮುನ್ನಡೆದಾಗ ಉತ್ತಮ ಚಿಂತನೆಗಳು ಮೂಡಲಿದೆ ಎಂದರು.

ಮಹಾಲಕ್ಷ್ಮೀಪುರ ಬ್ರಾಹ್ಮಣ ಸಭಾ ಅಧ್ಯಕ್ಷ ವೆಂಕಟೇಶ ಶಾಸ್ತ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು .

ಕಾರ್ಯಕ್ರಮದಲ್ಲಿ ಅಶೋಕ್ ಹಾರನಹಳ್ಳಿ ದಂಪತಿಗಳನ್ನು ಸಚಿವ ಗೋಪಾಲಯ್ಯ ಬ್ರಾಹ್ಮಣ ಮಹಾ ಸಭಾ ಸ್ಥಳೀಯ ಘಟಕದ ಪರವಾಗಿ ಸನ್ಮಾನಿಸಿದರು. ಮಾಜಿ ಉಪ ಮೇಯರ್ ಹರೀಶ್, ಬಿಬಿಎಂಪಿ ಮಾಜಿ ಸದಸ್ಯರಾದ ಲಕ್ಷ್ಮೀಚಿಕ್ಕೇಗೌಡ, ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳಾದ ಹಿರಿಯಣ್ಣಸ್ವಾಮಿ, ರಾಜೇಂದ್ರ ಪ್ರಸಾದ್, ವೆಂಕಟೇಶ ನಾಯಕ್, ಶ್ರೀಧರಮೂರ್ತಿ ಉಪಸ್ಥಿತರಿದ್ದರು.        

 ಕಾರ್ಯಕ್ರಮದ ಸಾರಥ್ಯ ವಹಿಸಿದ್ದ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಘವೇಂದ್ರಭಟ್ ಇದೇ ಸಂದರ್ಭದಲ್ಲಿ ಬ್ರಾಹ್ಮಣ ಮಹಾ ಸಭಾ ಸ್ಥಳೀಯ ಘಟಕ ಮಕ್ಕಳಿಗಾಗಿ ಹಮ್ಮಿಕೊಂಡಿರುವ  ಬೇಸಿಗೆ ಶಿಬಿರದ ಕುರಿತು ವಿವರಿಸಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ನಿಟ್ಟಿನಲ್ಲಿ ಈ ಬೇಸಿಗೆ ಶಿಬಿರ ಸಹಕಾರಿ ಆಗಲಿದೆ ಎಂದರು.