NEWS DETAILS

Image Description

"ದಿ ಕಾಶ್ಮೀರಿ ಫೈಲ್ಸ್ " ಚಿತ್ರದ ವಿಶೇಷ ಪ್ರದರ್ಶನ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ  ಶ್ರೀ ಅಶೋಕ್ ಹಾರನಹಳ್ಳಿ ರವರ ನೇತೃತ್ವದಲ್ಲಿ ಹಾಗು  ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಉದಯ್ ಗರುಡಾಚಾರ್ ಅವರ ಸಹಕಾರದೊಂದಿಗೆ "ದಿ ಕಾಶ್ಮೀರಿ ಫೈಲ್ಸ್ " ಚಿತ್ರದ ವಿಶೇಷ ಪ್ರದರ್ಶನವನ್ನು AKBMS ನ ಪದಾಧಿಕಾರಿಗಳಿಗೆ, ಕಾರ್ಯಕಾರಿ ಸಮಿತಿ ಸದಸ್ಯರುಗಳಿಗೆ ಹಾಗೂ ವಿಪ್ರ ಬಾಂಧವರಿಗೆ 26 /03 /2022 ರಂದು ಐನಾಕ್ಸ್ ಚಿತ್ರಮಂದಿರ, ಗರುಡಾ ಮಾಲ್ ಬೆಂಗಳೂರಿನಲ್ಲಿ ಏರ್ಪಡಿಸಲಾಗಿತ್ತು. ಈ ಸಂಧರ್ಭದಲ್ಲಿ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರೂ ಅಂದು ಕಾಶ್ಮೀರದಲ್ಲಿ ನಡೆದ ಕಾಶ್ಮೀರೀ ಪಂಡಿತರ  ನರಮೇಧವನ್ನು ಖಂಡಿಸಿದರು. ಮುಂದಿನ ದಿನಗಳಲ್ಲಿ ಮಹಾಸಭಾ ಈ ವಿಷಯದ ಬಗ್ಗೆ ಸಂವಾದವನ್ನು ಏರ್ಪಡಿಸಲಿದೆ ಅತೀ ಶೀಘ್ರದಲ್ಲಿ ಇದರ ಹೆಚ್ಚಿನ ವಿವರಗಳನ್ನು ನಿಮ್ಮೊಡನೆ ಹಂಚಿಕೊಳ್ಳಲಾಗುವುದು. 
ವಂದನೆಗಳೊಂದಿಗೆ,
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)