ದಿನಾಂಕ 25/08/2024 ರ ಭಾನುವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಬಂಟ್ವಾಳ ಕೂಟ ಮಹಾ ಜಗತ್ತು ಇವರ ಸಂಯುಕ್ತ ಆಶ್ರಯದಲ್ಲಿ ಆಧ್ಯಾತ್ಮಿಕ ಚಿಂತನ ಶಿಬಿರವು ಬಂಟ್ವಾಳ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು.
ವೇದಮೂರ್ತಿ ಶ್ರೀ ರಾಜಶೇಖರ ರಾವ್ ಕಾರಿಂಜ ಇವರು ಪ್ರತಿ ಮನೆಯಲ್ಲಿ ಜಪ ಪೂಜೆ ಹಾಗೂ ಮಹಾಲಯ ಇನ್ನಿತರ ಕಾರ್ಯ ಮಾಡುವ ಔಚಿತ್ಯದ ಬಗ್ಗೆ ಮೊದಲ ಅವಧಿಯ ವಿಚಾರ ಮಂಡಿಸಿದರು.
ಎರಡನೇ ಅವಧಿಯಲ್ಲಿ ವೇದಮೂರ್ತಿ ಶ್ರೀ ಕಶೆಕೋಡಿ ಸೂರ್ಯ ನಾರಾಯಣ ಭಟ್ ಇವರು ಯುವ ಪೀಳಿಗೆಗೆ ಸನಾತನ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದರಲ್ಲಿ ಹಿರಿಯರ ಪಾತ್ರದ ಬಗ್ಗೆ ವಿಚಾರ ಮಂಡಿಸಿದರು. ಈ ಸಭೆಯಲ್ಲಿ ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆಯ ಅಧ್ಯಕ್ಷ ರಮೇಶ್ ಹೊಳ್ಳ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಶ್ರೀಧರ್ ಹೊಳ್ಳ,ಮಹಿಳಾ ಸಂಚಾಲಕಿ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಉಮಾ ಸೋಮಯಾಜಿ, ಕೂಟ ಮಹಾ ಜಗತ್ತು ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಬಂಟ್ವಾಳ ತಾಲೂಕಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀ ಜಗದೀಶ ಹೊಳ್ಳ ಕಾರ್ಯಕ್ರಮ ನಿರ್ವಹಿಸಿದರು.