NEWS DETAILS

Image Description

ಕೊಪ್ಪಳದ ವಿಪ್ರ ಮುಖಂಡರು ಹಾಗು ಮಾಜಿ ಕಾರ್ಪೊರೇಟರ್ ಆದ ವೇಣು ಗೋಪಾಲ ಜಹಾಗಿರ್ದರ್ ಅವರ ಮನೆಯಲ್ಲಿ ನಡೆದ ವಿಪ್ರ ಮುಖಂಡರ ಸಭೆ

ಕೊಪ್ಪಳದ ವಿಪ್ರ ಮುಖಂಡರು ಹಾಗು ಮಾಜಿ ಕಾರ್ಪೊರೇಟರ್ ಆದ ವೇಣು  ಗೋಪಾಲ ಜಹಾಗಿರ್ದರ್ ಅವರ ಮನೆಯಲ್ಲಿ  ನಡೆದ ವಿಪ್ರ ಮುಖಂಡರ ಸಭೆ - ಈ ಸಭೆಯಲ್ಲಿ ಮಹಾಸಭೆ ನಡೆದು ಬಂದ ಹಾದಿ ಹಾಗು ವಿಪ್ರ ಸಮಾಜ ಎದುರಿಸುತ್ತಿರುವ ಸವಾಲುಗಳ ಬಗ್ಗೆ  ಚರ್ಚಿಸಲಾಯಿತು, ಕೊಪ್ಪಳದಲ್ಲಿ ವಿಪ್ರ ಸಂಘಟನೆಯನ್ನು ಇನ್ನಷ್ಟು ಬಲಗೊಳಿಸುವುದಾಗಿ ಸಮಾಜದ ಪ್ರಮುಖರಾದ ಅಪ್ಪಣ್ಣ ಪದಕಿ, ಪ್ರಾಣೇಶ್ ಮಾದಿನೂರ , ಸುರೇಶ್ ದೇಸಾಯಿ (ಮಾಜಿ ನಗರಸಭಾ ಸದಸ್ಯರು) ಮಹಿಳಾ ಮುಖಂಡರಾದ ಮಧುರ ಕರ್ಣಂ, ವೈಷ್ಣವಿ ಹುಲಗಿ, ಲತಾ ಮುಧೋಳ್ , ವಾಣಿ ದೇಶಪಾಂಡೆ, ಸೌಮ್ಯ ಗುಡಿ ಹಾಗು ಶಾಸ್ತ್ರಿ ಮಾಲಿನಿ ಅವರು  ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಲ್ಲ ಮುಖಂಡರು ಅಶೋಕ ಹಾರನಹಳ್ಳಿ ಅವರ ವಿಪ್ರ ಸಮಾಜದೆಡೆಗಿರುವ ಕಾಳಜಿಯನ್ನು ಕೊಂಡಾಡಿದರು ಹಾಗೂ ಅವರ ಮುಖಂಡತ್ವವದಲ್ಲಿ ವಿಪ್ರ ಸಮಾಜದ ಸಂಘಟನೆ ಬೆಂಗಳೂರಿನಿಂದ ಸಣ್ಣ ಸಣ್ಣ ಪಟ್ಟಣಗಳ ಕಡೆಗೂ ವಿಸ್ತರಿಸಿರುವುದು ಹೆಮ್ಮೆಯ ವಿಷಯ ಹಾಗು ಮುಂದೆಯೂ ಇದು ಹೀಗೆ ನಡೆಯಬೇಕು ಎಂದು ವಿನಂತಿಸಿದರು   - ಸಂಘಟನಾ ಕಾರ್ಯದರ್ಶಿ-  ಕಾರ್ತಿಕ್  ಬಾಪಟ್ - ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)