ಬಳ್ಳಾರಿಯಲ್ಲಿ ಚಾತುರ್ಮಾಸದಲ್ಲಿರುವ ಹರಿಹರಪುರ ಮಠದ ಗುರುಗಳಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) ವತಿಯಿಂದ ಭಿಕ್ಷಾ ವಂದನೆಯನ್ನು ಸಮರ್ಪಿಸಲಾಯಿತು, ಈ ಸಂದರ್ಭದಲ್ಲಿ ಮಹಾಸಭಾ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಅವರು, ಮಹಾಸಭಾ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಜಯಸಿಂಹ ಶತ್ರುಘ್ನ , ಶ್ರೀ ಕಾರ್ತಿಕ್ ಬಾಪಟ್ ಹಾಗು ಬಳ್ಳಾರಿಯ ವಿಪ್ರ ಮುಖಂಡರಾದ ಶ್ರೀನಿವಾಸ ರಾವ್ ಹಾಗೂ ಬಳ್ಳಾರಿಯ ಮಾಜಿ ಕಾರ್ಪೊರೇಟರ್ ರಘುನಂದನ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹರಿಹರಪುರ ಮಠದ ಶ್ರೀಗಳು ಪ್ರಸಕ್ತ ಸಂದರ್ಭದಲ್ಲಿ ಸನಾತನ ಧರ್ಮ ಎದುರಿಸುತ್ತಿರುವ ವಿಪತ್ತಿನ ಬಗ್ಗೆ ತಿಳಿಸುತ್ತಾ , ಎಲ್ಲ ಸನಾತನಿಗಳು ಸಂಘಟಿತರಾಗುವ ಅವಶ್ಯಕತೆಯಿದೆ ಎಂದು ತಿಳಿಸಿದರು ಹಾಗು ಈ ಉದ್ದೇಶದ ಹಿನ್ನಲೆಯಲ್ಲಿ ಭಾರತಾದ್ಯಂತ ಎಲ್ಲ ಸಾಧು ಸಂತರು ಸಮಷ್ಟಿ ಯಲ್ಲಿ ಚಿಂತನೆ ಮಾಡುವ ಅವಶ್ಯಕತೆಯ ಬಗ್ಗೆ ಹೇಳಿದರು, ಕಾರ್ತಿಕ್ ಬಾಪಟ - ಸಂಘಟನಾ ಕಾರ್ಯದರ್ಶಿ - ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ (ರಿ)