ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನಡೆಸುತ್ತಿರುವ ವಿದ್ಯಾವಾಸಿನಿ ಮಹಿಳಾ ವಿದ್ಯಾರ್ಥಿ ನಿಲಯಕ್ಕೆ 18 ಮೇ ದಿನದಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಎವಿ ಚಂದ್ರಶೇಖರ್ ಮತ್ತು ಜೆ ಫ್ರಾಗ್ ಕಂಪನಿಯ ಆರ್ ಎನ್ ಡಿ ಯ ಮುಖ್ಯಸ್ಥರಾದ ಶ್ರೀ ಪ್ರಸನ್ನ ರಾಘವೇಂದ್ರ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಶ್ರೀ ಎವಿ ಚಂದ್ರಶೇಖರ್ ಅವರು ವಿದ್ಯಾರ್ಥಿ ನೆಲೆಯಕ್ಕೆ ನಾಲ್ಕು ವಾಟರ್ ಫಿಲ್ಟರ್ ಗಳನ್ನು ಕೊಡುಗೆಯಾಗಿ ನೀಡಿದ್ದನ್ನು ಚಾಲನೆಗೊಳಿಸಿದರು ಮತ್ತು 10 ಲ್ಯಾಪ್ಟಾಪ್ ಗಳನ್ನು ಬಡ ವಿದ್ಯಾರ್ಥಿಗಳಿಗೆ ನೀಡಿದರು. ಶ್ರೀ ಪ್ರಸನ್ನ ರಾಘವೇಂದ್ರ ಅವರು ವಿದ್ಯಾರ್ಥಿ ನಾಲ್ಕು ವಾಷಿಂಗ್ ಮಷೀನ್ ಅನ್ನು ನೀಡುವುದಾಗಿ ವಾಗ್ದಾನ ಮಾಡಿದರು. ಈ ಕಾರ್ಯಕ್ರಮದ ನೇತೃತ್ವವನ್ನು ನಮ್ಮ ವಸತಿ ನಿಲಯದ ಮುಖ್ಯಸ್ಥರು ಮತ್ತು ಇನ್ಫೋಸಿಸ್ ಕಂಪನಿಯ ನಿರ್ದೇಶಕರಾದ ಶ್ರೀ ಕೃಷ್ಣ ಸ್ವಾಮಿ ಅವರು ವಹಿಸಿದ್ದರು