NEWS DETAILS

Image Description

ಬೆಳಗಾವಿಯಲ್ಲಿ ಬ್ರಾಹ್ಮಣ ಉದ್ದಿಮೆದಾರರ ಸಂಘಟನಾ ಸಭೆ - ಮಹಾಸಭಾದ ಸಂಘಟನೆಗೆ ಬಲವರ್ಧನಗೆ ನಿರ್ಧಾರ

ಬೆಳಗಾವಿಯಲ್ಲಿ ಬ್ರಾಹ್ಮಣ ಉದ್ದಿಮೆದಾರರ  ಸಂಘಟನಾ ಸಭೆ - ಮಹಾಸಭಾದ ಸಂಘಟನೆಗೆ   ಬಲವರ್ಧನಗೆ ನಿರ್ಧಾರ.
ಬೆಳಗಾವಿಯ ಉದ್ಯಮಬಾಗದಲ್ಲಿರುವ ಸಿಲೆಬ್ರೇಷನ್ಸ್ ಸಭಾಂಗಣದಲ್ಲಿ ಉದ್ಯಮಿ ಭರತ್ ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರ್ಥಿಕವಾಗಿ ಹಿಂದುಳಿದರಿಗೆ ನೆರವಿನ ಹಸ್ತ ಚಾಚುವುದೂ ಹಾಗು  ಮಹಾಸಭಾದ ಸಂಘಟನೆ ಮತ್ತು  ಸದಸ್ಯತ್ವ ಅಭಿಯಾನಕ್ಕೆ  ಬಲವರ್ಧನಕ್ಕೆ ನಿರ್ಧರಿಸಲಾಯಿತು.ಸಂಘಟನೆ ದೃಷ್ಟಿಯಿಂದ ಪ್ರತಿ ಹದಿನೈದು ದಿನಕ್ಕೊಮ್ಮೆ ಸಭೆ ಸೇರಲು ಸಭಾಧ್ಯಕ್ಷರು ಸಮ್ಮತಿ ಸೂಚಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ  ವಿಲಾಸ ಜೋಶಿ ಅವರು ಸದಸ್ಯತ್ವ ಅಭಿಯಾನ ಮತ್ತು ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿಯವರ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು, ಸಭೆಯಲ್ಲಿ ಸಂಜೀವ ಕುಲಕರ್ಣಿ, ಸೂರಜ ಕುಲಕರ್ಣಿ, ವಿಲಾಸ ಬಾದಾಮಿ ,ರಾಕೇಶ ದೇಶಪಾಂಡೆ, ಟಿ.ಆರ್. ಗೋಮತಿ, ಗುರುರಾಜ ಕುಲಕರ್ಣಿ, ಸಂಜಯ ಕುಲಕರ್ಣಿ, ಶಿಲ್ಪಾ ಕುಲಕರ್ಣಿ, ನಗರ ಸೇವಕಿ ವಾಣಿ ಜೋಶಿ, ಅಕ್ಷಯ ಕುಲಕರ್ಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವಂದನೆಗಳೊಂದಿಗೆ,
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)