ದಿನಾಂಕ 25.02.2022ರ ಶುಕ್ರವಾರ ಸಂಜೆ ಬೆಂಗಳೂರಿನ ಕೇಂದ್ರ ಕಚೇರಿ ಗಾಯತ್ರಿ ಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಮಹಿಳಾ ವಿಭಾಗದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ದ್ವಿಚಕ್ರ ಮತ್ತು 4ಚಕ್ರ ವಾಹನಗಳ ಬೃಹತ್ ರಾಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಪೋಸ್ಟರನ್ನು ಮಹಾಸಭಾಧ್ಯಕ್ಷ ಶ್ರೀ ಅಶೋಕ್ ಹಾರನಹಳ್ಳಿಯವರು, ಪದಾಧಿಕಾರಿಗಳು ಹಾಗೂ ಮಹಿಳಾ ವಿಭಾಗದ ಸದಸ್ಯರುಗಳು ಲೋಕಾರ್ಪಣೆ ಗೊಳಿಸಿದರು.
ಮಹಿಳಾ ವಿಭಾಗದ ಕಾರ್ಯಕ್ರಮದ ಪೋಸ್ಟರನ್ನು ಲೋಕಾರ್ಪಣೆಗೊಳಿಸಿ ಮಹಾಸಭಾಧ್ಯಕ್ಷರು ಮಾತನಾಡುತ್ತಾ, ಮಹಿಳೆಯರನ್ನು ಒಗ್ಗೂಡಿಸಿ, ಸಂಘಟನೆಯನ್ನು ಸದೃಢಗೊಳಿಸಲು ಕೈಗೊಂಡಿರುವ ಮಹಿಳಾ ವಿಭಾಗದ ಈ ಕಾರ್ಯಕ್ರಮವು ಸರ್ವರೀತಿಯಲ್ಲೂ ಯಶಸ್ಸನ್ನು ಕಾಣಲಿ, ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.
ವಂದನೆಗಳೊಂದಿಗೆ
ಶ್ರೀಮತಿ ರೂಪಾ ಶಾಸ್ತ್ರಿ
ರಾಜ್ಯ ಸಂಚಾಲಕಿ, ಮಹಿಳಾ ವಿಭಾಗ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ