ಮಲ್ಲೇಶ್ವರಂ ಬ್ರಾಹ್ಮಣ ಸಂಘದವರು ಆಯೋಜಿಸಿದ್ದ "ಗೀತೋತ್ಸವ" ಕಾರ್ಯಕ್ರಮದಲ್ಲಿ ನಮ್ಮ ಸಭಾದ ಪರವಾಗಿ ಭಾಗವಹಿಸಲಾಯಿತು. ಇದೇ ಸಂದರ್ಭದಲ್ಲಿ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಮಠಾಧೀಶರಾದ ಶ್ರೀ ಶ್ರೀ ಶ್ರೀ ವೀರೇಶಾನಂದ ಸ್ವಾಮೀಜಿಯವರು ವೇದಿಕೆಗೆ ಆಗಮಿಸಿದ್ದರು.
ಸ್ವಾಮೀಜಿಯವರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಹಿಳಾ ವಿಭಾಗದ ವತಿಯಿಂದ ಏರ್ಪಡಿಸಲಾಗಿರುವ ಅಭಿಜಾತೆ 2024 ಮಹಿಳಾ ಸಮ್ಮೇಳನದ ಕಾರ್ಯಕ್ರಮದ ವಿವರಣೆಗಳನ್ನು ನೀಡಲಾಯಿತು. ಸ್ವಾಮೀಜಿಯವರನ್ನು ಸಮ್ಮೇಳನಕ್ಕೆ ಆಹ್ವಾನಿಸಿ, ಅವರಿಂದ ಆಶೀರ್ವಾದ ಪಡೆಯಲಾಯಿತು.
ಸಭೆಯನ್ನುದ್ದೇಶಿಸಿ ಮಹಾಸಭಾದ ಅಧ್ಯಕ್ಷರು, ಶ್ರೀ ಅಶೋಕ್ ಹಾರನಹಳ್ಳಿಯವರು ಸಮ್ಮೇಳನದ ಬಗ್ಗೆ ಮಾತನಾಡಿ, ವಿಪ್ರ ಮಹಿಳೆಯರು ಹಾಗೂ ಮಹನೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಮಹಾಸಭೆಯ ಪರವಾಗಿ ಶ್ರೀ ಛಾಯಾಪತಿಯವರೂ ಉಪಸ್ಥಿತರಿದ್ದರು.