NEWS DETAILS

Image Description

"ಅಭಿಜಾತೆ-2024" - ಎಳೇನಹಳ್ಳಿ

ಇಂದು, ನಮಗೆ ಬೆಂಗಳೂರಿನ ಎಳೇನಹಳ್ಳಿಯರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಠದಲ್ಲಿ ಲಕ್ಷ್ಮೀನೃಸಿಂಹ, ಸುಬ್ರಹ್ಮಣ್ಯ, ರಾಘವೇಂದ್ರ ದೇವರುಗಳ ದರುಶನ ಭಾಗ್ಯ ದೊರೆಯಿತು. ತದನಂತರ ಇದೇ ಶ್ರೀಮಠದ ಡಾ. ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರ ದರ್ಶನವನ್ನೂ ಪಡೆದೆವು.

ಹಾಗೂ ಶ್ರೀ ಶ್ರೀ ಶ್ರೀ ಗಳಿಗೆ ನಮ್ಮ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ವಿಭಾಗದ ವತಿಯಿಂದ ಜನವರಿ 6-7, 2024ರಂದು ನಡೆಸಲಿರುವ 3ನೇ ರಾಜ್ಯಮಟ್ಟದ ವಿಪ್ರ ಮಹಿಳಾ ಸಮ್ಮೇಳನ "ಅಭಿಜಾತೆ-2024" ರ ಬಗ್ಗೆ ವಿವರಿಸಿ, ಸಲಹೆ-ಸೂಚನೆಗಳನ್ನು ಪಡೆಯಲಾಯಿತು. 
ನಮ್ಮ ಮಹಿಳಾ ಸಮ್ಮೇಳನದ ಆಮಂತ್ರಣ ಪತ್ರವನ್ನು ಭಗವಂತನ ಮತ್ತು ಗುರುಗಳ ಪಾದಗಳಿಗೆ ಅರ್ಪಿಸಿದೆವು. 
ಶ್ರೀ ಶ್ರೀ ಶ್ರೀ ಗಳು ವಿಪ್ರ ಮಹಿಳಾ
ಸಮ್ಮೇಳನವು ಸುಲಲಿತವಾಗಿ ನಡೆಯಲಿ ಎಂದು ನಮ್ಮನ್ನು ಆಶೀರ್ವದಿಸಿದುದು ನಮ್ಮ ಭಾಗ್ಯವೇ ಸರಿ.

- ಡಾ. ಶುಭಮಂಗಳ ಸುನಿಲ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಚಾಲಕಿ, ಮಹಿಳಾ ವಿಭಾಗ