ಕರ್ನಾಟಕ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಹೆಬ್ಬಾರ್ ರವರನ್ನು ಭೇಟಿ ಮಾಡಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ವಿಭಾಗದ ವತಿಯಿಂದ ಜನವರಿ 6-7, 2024ರಂದು ನಡೆಯಲಿರುವ 3ನೇ ರಾಜ್ಯಮಟ್ಟದ ವಿಪ್ರ ಮಹಿಳಾ ಸಮ್ಮೇಳನ "ಅಭಿಜಾತೆ-2024" ರ ಬಗ್ಗೆ ವಿಷದವಾಗಿ ಚರ್ಚಿಸಿ, ಅವರಿಂದ ಸಲಹೆಗಳನ್ನು ಪಡೆಯಲಾಯಿತು. ಅವರಿಗೆ ಆಮಂತ್ರಣ ಪತ್ರವನ್ನು ನೀಡಿ, ನಮ್ಮ ಅ.ಕ.ಬ್ರಾ.ಮ.ಸ. ಮಹಿಳಾ ವಿಭಾಗದ ಪರವಾಗಿ ಅಂದಿನ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು.
ಶ್ರೀಯುತರು, ಅಂದಿನ ಕಾರ್ಯಕ್ರಗಳ ಬಗ್ಗೆ ತಿಳಿದು, ಸಂತೋಷ ವ್ಯಕ್ತಪಡಿಸಿದರು. ಆಮಂತ್ರಣವನ್ನು ಹೃತ್ಪೂರ್ವಕವಾಗಿ ಸ್ವೀಕರಿಸಿದರು ಹಾಗೂ ಸಮ್ಮೇಳನಕ್ಕೆ ತಮ್ಮ ಬೆಂಬಲ, ಸಹಕಾರಗಳನ್ನು ನೀಡುವುದಾಗಿ ಹೇಳಿ, ನಮ್ಮನ್ನು ಪ್ರೋತ್ಸಾಹಿಸಿದರು ಎಂದು ಈ ಮೂಲಕ ನಿಮ್ಮೆಲ್ಲರಿಗೂ ತಿಳಿಸಲು ಹರ್ಷಿಸುತ್ತೇನೆ.