NEWS DETAILS

Image Description

ಉತ್ತರಕನ್ನಡಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಅವರ ಮಾರ್ಗದರ್ಶನದಂತೆ ಉತ್ತರಕನ್ನಡಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಈ ದಿನ ರಾಜ್ಯ ಉಪಾಧ್ಯಕ್ಷರಾದ ಶ್ರೀ ಶಶಿಭೂಷಣ ಹೆಗಡೆ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಕೃಷ್ಣಪ್ರಸಾದ್ ಹೆಗಡೆ ಶ್ರೀಕೃಷ್ಣ ಶಿವರಾಮ ಹೆಗಡೆ ಮತ್ತು ನಾರಾಯಣ ಜಿ ಹೆಗಡೆ ಇವರ ನೇತೃತ್ವದಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳ ಹಿರಿಯ ಮುಖಂಡರ ಜೊತೆಯಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು ಸಭೆಯಲ್ಲಿ ಮಹಾಸಭಾದ ಎಲ್ಲ ಯೋಜನೆಗಳನ್ನು ಸವಿವರವಾಗಿ ವಿವರಿಸಿ ರಾಜ್ಯಮಟ್ಟದಲ್ಲಿ ಮಹಾಸಭೆಯ ಸದಸ್ಯತ್ವವನ್ನು ಬಲಗೊಳಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಾಸಭೆಗೆ ಸದಸ್ಯತ್ವ ನೊಂದಣಿಯನ್ನು ಮಾಡಬೇಕೆಂದು ಸರ್ವಾನುಮತದಿಂದ ಒಪ್ಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆಯನ್ನು ನೀಡಲಾಯಿತು ಹಾಗೂ ಜಿಲ್ಲಾ ಉಪಸಮಿತಿಯನ್ನು ಮತ್ತು ತಾಲೂಕು ಸಮಿತಿಯನ್ನು ರಚಿಸಿ ಸದಸ್ಯತ್ವಕ್ಕೆ ಚಾಲನೆಯನ್ನು ನೀಡಲಾಯಿತು ಸಭೆಯನ್ನು ಸಿದ್ಧಾಪುರ ದಲ್ಲಿರುವ ಶ್ರೀ ಶೃಂಗೇರಿ ಶಂಕರಮಠದಲ್ಲಿ ಬಹಳ ಅಚ್ಚುಕಟ್ಟಾಗಿ ಏರ್ಪಡಿಸಲಾಗಿತ್ತು
ಇಂತಿ
ಬಿಎಸ್ ರಾಘವೇಂದ್ರ ಭಟ್
ರಾಜ್ಯ ಸಂಘಟನಾ ಕಾರ್ಯದರ್ಶಿ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು