ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್) ವತಿಯಿಂದ ಸದಸ್ಯತ್ವ ಅಭಿಯಾನ ಹಾಗೂ ವಿಪ್ರ ನುಡಿ ಪತ್ರಿಕೆಗೆ ಚಂದಾದಾರಿಕೆ ಕುರಿತು ಅರಿವಳಿಕೆ ಕಾರ್ಯಕ್ರಮ 15ನೇ ಅಕ್ಟೋಬರ್ 2023 ರ ಸಂಜೆ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪ್ರಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅನೇಕ ಯೋಜನೆಗಳು ಮತ್ತು ಅಕ್ಟೋಬರ್ 29, 2023 ರಂದು ಕಲಬುರಗಿಯಲ್ಲಿ ನಡೆಯಲಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಕುರಿತು ಮಾಹಿತಿ ನೀಡುವ ಮಹತ್ತರ ಕಾರ್ಯಕ್ರಮ ನೆರವೇರಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಅರುಣ್ ಹಿರಿಯಣ್ಣ, ಕಲಬುರಗಿ ವಲಯ ಉಪಾಧ್ಯಕ್ಷರಾದ ಶ್ರೀ ಶ್ರೀಧರ್ ಸರಾಫ್, ಶ್ರೀ ಪ್ರಮೋದ್ ದೇಶಪಾಂಡೆ ಮಾತನಾಡಿ ಸರ್ವರೂ ಸದಸ್ಯರಾಗಲು ಮುಂದೆ ಬರುವಂತೆ ಆಮಂತ್ರಿಸಿದರು.
ಜೇವರ್ಗಿ ತಾಲ್ಲೂಕಿನ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ರಮೇಶ ಬಾಬು ವಕೀಲರು ಮಾತನಾಡಿ ಮಹಾಸಭೆಯ ಯೋಜನೆಗಳು ಮತ್ತು ಸದಸ್ಯತ್ವ ಅಭಿಯಾನದ ಕುರಿತು ಹರ್ಷ ವ್ಯಕ್ತಪಡಿಸುತ್ತ ಸರ್ವರೂ ಸದಸ್ಯತ್ವ ಪಡೆಯುವದಷ್ಟೇ ಅಲ್ಲದೇ ಮುಂಬರುವ ದಿನಗಳಲ್ಲಿ ಮಹಾಸಭೆ ಹಮ್ಮಿಕೊಳ್ಳುವ ಯಾವುದೇ ಸಮಾಜಮುಖಿ ಕೆಲಸಕ್ಕೆ ಬೆಂಬಲಿಸುವದಾಗಿ ಹೇಳುತ್ತಾ ಪ್ರಸ್ತುತ ಸಮಾಜ ಅನುಭವಿಸುತ್ತಿರುವ ಅನೇಕ ಸಮಸ್ಯೆಗಳ ಕುರಿತು ವಿವರಿಸಿ ಮಹಾಸಭೆಯಂತಹ ಸಂಘಟನೆಗಳು ಬ್ರಾಹ್ಮಣರಲ್ಲಿರುವ ಯಾವುದೇ ಮತ ಭೇದಗಳನ್ನು ತೊಡೆದು ಒಗ್ಗಟ್ಟಾಗಲು ಶ್ರಮಿಸಬೇಕು ಎಂದು ಹೇಳಿ ಅಂತಹ ಯಾವುದೇ ಕಾರ್ಯಕ್ರಮಗಳಲ್ಲಿ ತಾಲೂಕಿನ ಸಮಸ್ತ ಬ್ರಾಹ್ಮಣರು ಭಾಗವಹಿಸುವದಾಗಿ ತಿಳಿಸಿದರು.
ಜೇವರ್ಗಿಯ ಅನೇಕ ವಿಪ್ರೋತ್ತಮರು ಅಲ್ಲದೇ ಎಡ್ರಾಮಿಯ ಶ್ರೀ ಮಲ್ಹಾರರಾವ್ ಕುಲಕರ್ಣಿ,ಹಂಗರಗಿಯ ಶ್ರೀ ಲಕ್ಷ್ಮಣ ಕುಲಕರ್ಣಿ ಮುಂತಾದ ಬ್ರಾಹ್ಮಣ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.