NEWS DETAILS

Image Description

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಲಬುರಗಿ ವಲಯ ಉಪಾಧ್ಯಕ್ಷ ಶ್ರೀ ಶ್ರೀಧರ ಸರಾಫ್ ಮತ್ತು ಅನೇಕ ವಿಪ್ರ ರೈತ ಬಂಧುಗಳ ಪ್ರಥಮ ಸಭೆ ಕಳೆದ ಭಾನುವಾರ ಶ್ರೀ ರವೀಂದ್ರ ಟೆಂಗಳಿ ಇವರ ಕಾರ್ಯಾಲಯದಲ್ಲಿ ನಡೆಯಿತು

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಲಬುರಗಿ ವಲಯ ಉಪಾಧ್ಯಕ್ಷ ಶ್ರೀ ಶ್ರೀಧರ ಸರಾಫ್ ಮತ್ತು ಅನೇಕ ವಿಪ್ರ ರೈತ ಬಂಧುಗಳ ಪ್ರಥಮ ಸಭೆ ಕಳೆದ ಭಾನುವಾರ ಶ್ರೀ ರವೀಂದ್ರ ಟೆಂಗಳಿ ಇವರ ಕಾರ್ಯಾಲಯದಲ್ಲಿ ನಡೆಯಿತು.

ಮುಂಬರುವ ದಿನಗಳಲ್ಲಿ ಬ್ರಾಹ್ಮಣ ರೈತಬಾಂಧವರ ಸಂಘಟನೆ ಮಾಡಿ ಸಮಾಜವನ್ನು ಗಟ್ಟಿಗೊಳಿಸುವ ಕಾರ್ಯ ಮಾಡಲು ಒಗ್ಗಟ್ಟಾಗಿ ಕೆಲಸ ಮಾಡಲು ನಿರ್ಧರಿಸಿ - ಹಲವಾರು ವಿಷಯಗಳ ಕುರಿತು ಚರ್ಚಿಸಲಾಯಿತು.

ಶ್ರೀ ಸಂಜೀವ ಪಾಟೀಲ್,ಶ್ರೀ ಶ್ರೀಪಾದ್ ಕುಲಕರ್ಣಿ,ಶ್ರೀ ಪ್ರೀತಲ್ ಕುಲಕರ್ಣಿ,ಶ್ರೀ ಗುರುರಾಜ ದೇಶಪಾಂಡೆ,ಶ್ರೀ ಸಂತೋಷ್ ಪಾಟೀಲ್ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

ಹಲವಾರು ಬ್ರಾಹ್ಮಣ ರೈತ ಬಾಂಧವರು ಸಭೆಗೆ ಬೆಂಬಲ ವ್ಯಕ್ತಪಡಿಸಿದ್ದು,ಮುಂದಿನ ಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವದಾಗಿ ತಿಳಿಸಿದ್ದಾರೆ.