ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಇದರ ನೋಂದಾಯಿತ ಸಂಸ್ಥೆ, ಬ್ರಾಹ್ಮಣ ಮಹಾಸಭಾ ಸುರತ್ಕಲ್ ವಲಯ ಇದರ 26ನೇ ವಾರ್ಷಿಕ ಮಹಾಸಭೆ ಹಾಗೂ 24ನೇ ಶನೀಶ್ವರ ಪೂಜೆ ರಾಘವೇಂದ್ರ ಮಠ ಹೊಸಬೆಟ್ಟು ಇಲ್ಲಿ ಹಮ್ಮಿಕೊಳ್ಳಲಾಯಿತು. ಇದರ ಅಂಗವಾಗಿ ಪ್ರತಿಭಾ ಪುರಸ್ಕಾರ ವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಹ ಕಾರ್ಯದರ್ಶಿ ಶ್ರೀಮತಿ ಚೇತನಾ ದತ್ತಾತ್ರೇಯ ಪಾಲ್ಗೊಂಡು, ಪ್ರತಿಭಾನ್ವಿತರನ್ನು ಗೌರವಿಸಿದರು. ಸಂಘದ ಗೌರವ ಅಧ್ಯಕ್ಷ ಶ್ರೀ ಪಿ. ಪುರುಷೋತ್ತಮ್ ರಾವ್ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು, ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು, ಖ್ಯಾತ ನೇತ್ರ ತಜ್ಞ ಡಾ. ಬಿ ಗುರುರಾಜ್, ಇನ್ನಿತರರು ಉಪಸ್ಥತರಿದ್ದರು.