NEWS DETAILS

Image Description

ಬೆಂಗಳೂರು ಮಹಾನಗರದ ತೆಲುಗು ಸ್ಮಾರ್ತ ವೇದಿಕಾ(ರಿ) ವತಿಯಿಂದ ಪ್ರತಿ ವರ್ಷದಂತೆ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮ

ಬೆಂಗಳೂರು ಮಹಾನಗರದ ತೆಲುಗು ಸ್ಮಾರ್ತ ವೇದಿಕಾ(ರಿ) ವತಿಯಿಂದ ಪ್ರತಿ ವರ್ಷದಂತೆ ಇಂದು ಸಹ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ಅಚರಿಸಿದರು, ಕಾರ್ಯಕ್ರಮದಲ್ಲಿ ಸುಮಾರು 800 ಕ್ಕೂ ಹೆಚ್ಚಿನ ಜನ ಭಾಗವಹಿಸಿದ್ದರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ವಿಭಾಗದ ರಾಜ್ಯ ಸಂಚಾಲಕಿ ಡಾ|| ಶುಭಮಂಗಳ ಸುನಿಲ್ ಅವರು ಮಾತನಾಡಿ ನಮ್ಮ ಸಂಪ್ರದಾಯ ವನ್ನು ಇಂತಹ ಸಂಘ ಸಂಸ್ಥೆಗಳು ಉಳಿಸಿಕೊಂಡು ಹೋಗುತ್ತಿದ್ದು, ನಾವು ಬ್ರಾಹ್ಮಣರು ಅಂತ ಹೇಳಿಕೂಳ್ಳಲು ಹಿಂಜರಿಯಬಾರದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿರುವುದು ನಿಜಕ್ಕೂ ಸಂತೋಷದ ವಿಷಯ, ಮಹಾಸಭಾದ ಕಾರ್ಯಕ್ರಮ ಗಳಲ್ಲಿ ಸಹ ತಾವೆಲ್ಲರೂ ಭಾಗವಹಿಸಿ ಎಂದು ತಿಳಿಸಿ ಮಹಿಳಾ ವಿಭಾಗದ ಬಗ್ಗೆ ಮಾಹಿತಿಯನ್ನು ನೀಡಿದರು, ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಥಯಾತ್ರೆಸುರೇಶ್, ಸಹ ಕಾರ್ಯದರ್ಶಿ ಚಂದ್ರಶೇಖರ್, ಕಾರ್ಯಕಾರಿಣಿ ಸದಸ್ಯರಾದ ಎಸ್.ಕೆ. ಕೌಶಿಕ್,  ತೆಲುಗು ಸ್ಮಾರ್ತ ವೇದಿಕಾ ಅಧ್ಯಕ್ಷ ರಾದ ಎಸ್. ಆರ್. ಸತ್ಯನಾರಾಯಣ,  ಪ್ರಾಧಾನ ಕಾರ್ಯದರ್ಶಿ ಕೆ.ಎಸ್. ವೆಂಕಟೇಶ ಶಾಸ್ತ್ರಿ, ಡಾ|| ಮುರಳೀಧರ ಶರ್ಮ, ಡಾ|| ಸೂರ್ಯಪ್ರಕಾಶ್ ಹಾಗೂ ಇತರರು ಹಾಜರಿದ್ದರು, ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಿನ ವಿಪ್ರ ಬಂದುಗಳು ಭಾಗವಹಿಸಿದ್ಸ ಕಾರ್ಯಕ್ರಮ ವನ್ನು ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು,