ಬೆಂಗಳೂರಿನ ಇಂದಿರಾಗಾಂಧಿ ಸರ್ಕಲ್, ಜೆಪಿ ನಗರದ ಅಕ್ಷಯ ವಿಪ್ರ ಮಹಾ ಸಭಾದ ವತಿಯಿಂದ ಶ್ರೀ ರಾಮ ಕೋಟಿ ಲಿಖಿತ ಜಪ ಯಜ್ಞ ದೀಕ್ಷೆ ಪ್ರಯುಕ್ತ ಯೋಜಿಸಲಾದ ಸನ್ಮಾನ ಕಾರ್ಯಕ್ರಮದ ಪ್ರಯುಕ್ತ ಬ್ಯಾಂಕ್ ಕಾಲೋನಿ ನಾಗೇಂದ್ರ ಬ್ಲಾಕ್ನಲ್ಲಿ ವಾಸಿಸುತ್ತಿರುವ ಹಿರಿಯ ನಾಗರಿಕರಾದ 93 ವರ್ಷದ ಶ್ರೀಯುತ ಪೂಜನೀಯ ಸುಬ್ರಹ್ಮಣ್ಯಂ ಕೆ.ಎನ್. ಅವರಿಂದ 3,56,000 ಶ್ರೀರಾಮ ನಾಮಗಳನ್ನೂಳಗೂಂಡ 4 ಶ್ರೀರಾಮಕೋಟಿ ಪುಸ್ತಕಗಳನ್ನು ಭಕ್ತಿ ಪೂರ್ವಕವಾಗಿ ಅವರ ಆಪ್ತ ಕುಟುಂಬದವರ ಸಮ್ಮುಖದಲ್ಲಿ ಪೂಜಿಸಿ, ಸ್ವೀಕರಿಸಿ ಸನ್ಮಾನಿಸಲಾಯಿತೆಂದು ತಿಳಿಸಲು ಹರ್ಶಿಸುತ್ತೇವೆ. ಶ್ರೀಮತಿ ಸಂಧ್ಯಾ, ಶ್ರೀ ವಿಜಯಕುಮಾರ್ ಭಟ್ ಹಾಗೂ ಶ್ರೀಮತಿ ಗಾಯತ್ರಿ ದುರ್ಗಾಪ್ರಸಾದ, ಎಕೆಬಿಎಂಎಸ್ ಸದಸ್ಯರು