ದಿನಾಂಕ 11 /02 /2022 ಮಹಾಸಭಾದ ಕೇಂದ್ರ ಕಛೇರಿ ಗಾಯತ್ರಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಸವನಗುಡಿಯ ಶಾಸಕರಾದ ಶ್ರೀ ರವಿ ಸುಬ್ರಮಣ್ಯ ಅವರು ವಿಪ್ರ ನುಡಿ ಪತ್ರಿಕೆಗೆ ಮರುಚಾಲನೆ ನೀಡಿದರು, ಈ ಸಂದರ್ಭದಲ್ಲಿ ಮಹಾಸಭೆ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಅವರು ಮಾತನಾಡಿ , ಒಂದು ಪ್ರದೇಶದ ಜನರ ಸಂಸ್ಕೃತಿ ಅರಿಯಬೇಕೆಂದರೆ ಆ ಭಾಗದಲ್ಲಿ ಸಿಗುವ ಪತ್ರಿಕೆ ನೋಡಿದರೆ ಆ ಭಾಗದ ಜನರ ಒಟ್ಟಾರೆ ಅಭಿಪ್ರಾಯ ಮತ್ತು ಅಭಿರುಚಿಗಳ ಪರಿಚಯವಾಗುತ್ತದೆ ಎಂದು ವಿವರಿಸುತ್ತಾ ಮುಂದಿನ ದಿನಗಳಲ್ಲಿ ಕರ್ನಾಟಕದ ಉದ್ದಗಲಕ್ಕೂ ವಾಸವಾಗಿರುವ ವಿಪ್ರರ ಸಂಸ್ಕ್ರತಿ ಮತ್ತು ವಿಪ್ರ ಸಂಸ್ಕೃತಿ ಪೂರಕ ಲೇಖನವನ್ನು ಮನೆ ಮನಗಳಿಗೆ ಪರಿಚಯಿಸುವ ಮುಖವಾಣಿಯಾಗಿ ವಿಪ್ರನುಡಿ ಹೊರಹೊಮ್ಮಲಿದೆ ಎಂದು ತಿಳಿಸಿದರು. ಅಷ್ಟೇ ಅಲ್ಲ ಇದರ "ಈ ಪ್ರತಿ" (soft copy) www.akbms.com ನಲ್ಲಿ ಇದೇ ಬರುವ 16 ಫೆಬ್ರವರಿ ಯಂದು ಎಲ್ಲರಿಗೂ ಲಭ್ಯವಾಗಲಿದೆ ಎಂದು ತಿಳಿಸಿದರು.ಮತ್ತು ವಿಪ್ರ ನುಡಿಯ ಇಂಗ್ಲಿಷ್ ವರ್ಷನ್ ಕೂಡ ಅತೀ ಶೀಘ್ರದಲ್ಲಿ website ನಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದರು.
ವಂದನೆಗಳೊಂದಿಗೆ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)