ವಿಪ್ರ ಕಪ್ 2022.
13.11.2022ರಂದು ಬೆಂಗಳೂರಿನ ವಸಂತವಲ್ಲಭ ನಗರದಲ್ಲಿ ರಾಜ್ಯಮಟ್ಟದ ಎಲ್ಲಾ ತ್ರಿಮತಸ್ಥ ಬ್ರಾಹ್ಮಣರಿಗೆ ಬ್ಯಾಡ್ಮಿಂಟನ್ ಪಂದ್ಯಾಟವು ನಡೆಯಿತು. ಈ ಪಂದ್ಯಾಟವನ್ನು ಶ್ರೀ ವಿಲಾಸ್ ಖಾಡಿಲ್ಕರ್ ಹಾಗೂ ಶ್ರೀ ಶ್ರೀವತ್ಸ ಗೋಖಲೆ ಯವರು ಆಯೋಜಿಸಿದ್ದರು. ದ್ವಾರಕಾ ಲಾಡ್ಜಿಂಗ್ ನ ಮಾಲಕರಾದ ಶ್ರೀ ಶ್ರೀನಿವಾಸ್ ರಾವ್ ಅವರು ದೀಪ ಬೆಳಗಿಸಿ ಪಂದ್ಯಾಟಕ್ಕೆ ವಿದ್ಯುಕ್ತವಾಗಿ ಚಾಲನೆಯನ್ನು ನೀಡಿದರು. ಅವರೊಂದಿಗೆ ಹನುಮಗಿರಿ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಶ್ರೀ ಅಶ್ವಥ್ ನಾರಾಯಣ, ಹರ್ಷ ರಿಫ್ರೆಶ್ಮೆಂಟ್ ನ ಮಾಲಕರದ ಶ್ರೀ ಸುಧೀರ್, ಹನುಮಗಿರಿ ಬ್ರಾಹ್ಮಣ ಸಭಾದ ಕಾರ್ಯದರ್ಶಿಗಳಾದ ಶ್ರೀ ಮಂಜುನಾಥ್ ಉಪಸ್ಥಿತರಿದ್ದರು.
ಈ ಪಂದ್ಯಾಟವು 5 ವಿಭಾಗಗಳಲ್ಲಿ ನಡೆದಿದ್ದು ಸುಮಾರು 150ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿ ಈ ಪಂದ್ಯಾಟವನ್ನು ಯಶಸ್ವಿಯಾಗಿಸಿದರು.
ವಿಜೇತರ ವಿವರ :
1. ಪುರುಷರ ಸಿಂಗಲ್ಸ್ ವಿಭಾಗ :
ವಿಜೇತರು - ಶ್ರೀ ವಿದ್ಯಾನಂದ
ರನ್ನರ್ ಅಪ್ - ಶ್ರೀ ಶ್ರೀಪತಿ
2. ಪುರುಷರ ಡಬಲ್ಸ್ ವಿಭಾಗ :
ವಿಜೇತರು - ಶ್ರೀ ವಿದ್ಯಾನಂದ ಮತ್ತು ಶ್ರೀ ಕಿರಣ್
ರನ್ನರ್ ಅಪ್ - ಶ್ರೀ ವಾದಿರಾಜ್ ಮತ್ತು ಶ್ರೀ ಅಂಕಿತ್
3. ಮಹಿಳೆಯರ ಸಿಂಗಲ್ಸ್ ವಿಭಾಗ :
ವಿಜೇತರು - ಕು. ಪೂರ್ವಿ ಶರ್ಮ
ರನ್ನರ್ ಅಪ್ - ಕು. ಧನ್ಯಶ್ರೀ
4. ಮಹಿಳೆಯರ ಡಬಲ್ಸ್ ವಿಭಾಗ :
ವಿಜೇತರು - ಕು.ಧನ್ಯಶ್ರೀ ಮತ್ತು ಕು.ಅಕ್ಷತಾ
ರನ್ನರ್ ಅಪ್ -ಕು.ಶ್ರೀಯಾ ದತ್ತ್ ಮತ್ತು ಕು.ಪ್ರಗ್ನಾ
5. ಪುರುಷರ 40+ ವಿಭಾಗ :
ವಿಜೇತರು - ಶ್ರೀ ರಾಘವೇಂದ್ರ ಮತ್ತು ಶ್ರೀ ರತ್ನಪ್ರಸಾದ್
ರನ್ನರ್ ಅಪ್ - ಶ್ರೀ ರಾಘವೇಂದ್ರ ಮತ್ತು ಶ್ರೀ ಗುರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಸಹಕಾರ್ಯದರ್ಶಿಗಳಾದ ಶ್ರೀ ಕಾರ್ತಿಕ್ ಬಾಪಟ್ ಮಾತನಾಡಿ ಇಂತಹ ಕಾರ್ಯಕ್ರಮಗಳು ಬ್ರಾಹ್ಮಣ ಮಿತ್ರರನ್ನು ಸೇರಿಸಲು ಉತ್ತಮ ವೇದಿಕೆ ಎಂದು ಹೇಳಿದರು , ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಶ್ರೀ ಗಣಪತಿ ಜೋಶಿ, ಶ್ರೀ ನಿಖಿಲ್ ಭಾರದ್ವಾಜ್, ಶ್ರೀ ಜಯಸಿಂಹ ಶತ್ರುಘ್ನ, ಶ್ರೀಮತಿ ಪೂರ್ಣಿಮಾ ಜಗನ್ನಾಥ್, ಶ್ರೀ ಸುದರ್ಶನ ಪಟವರ್ಧನ್, ಶ್ರೀ ವಿನೋದ್ ಖಾಡಿಲ್ಕರ್ ಮತ್ತು ಬ್ಯಾಡ್ಮಿಂಟನ್ ಕೋರ್ಟ್ ನ ಮಾಲಕರಾದ ಶ್ರೀ ಧನಂಜಯರವರು ಉಪಸ್ಥಿತರಿದ್ದರು.
ಶ್ರೀಮತಿ ರಮ್ಯಾ ವಿ ಖಾಡಿಲ್ಕರ್ ರವರು ಪ್ರಾರ್ಥಿಸಿದರು, ಶ್ರೀ ಶ್ರೀವತ್ಸ ಗೋಖಲೆ ಮತ್ತು ಶ್ರೀ ವಿಲಾಸ್ ಖಾಡಿಲ್ಕರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿಶಾಖಾ ಗೋಖಲೆ ಯವರು ವಂದಿಸಿದರು.