NEWS DETAILS

Image Description

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದ. ಕ. ಜಿಲ್ಲಾ ಘಟಕವು ಆಯೋಜಿಸಿದ್ದ "ನಮ್ಮವರು- ನಮ್ಮ ಹೆಮ್ಮೆ " - ಸಮಾಜದ ವಿಪ್ರ ಬಂಧುಗಳ ವಿಶೇಷವಾದ ಸಾಧನೆಯನ್ನು, ಪ್ರತಿಭೆಯನ್ನು ನಮ್ಮವರೇ ಗುರುತಿಸುವಂತಹ ವಿನೂತನ ಕಾರ್ಯಕ್ರಮ

" ನಮ್ಮವರು - ನಮ್ಮ ಹೆಮ್ಮೆ"    - ವಿಪ್ರ  ಸಾಧಕರನ್ನು ಗುರುತಿಸುವ ,ಅಭಿನಂದಿಸುವ ,ಆನಂದಿಸುವ  , ಕಾರ್ಯಕ್ರಮ ಇಡೀ ರಾಜ್ಯಕ್ಕೆ ಮಾದರಿ . ಈ ವಿನೂತನ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ನಡೆಸಲು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿಯವರು ಕರೆ ನೀಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದ. ಕ. ಜಿಲ್ಲಾ ಘಟಕವು ಆಯೋಜಿಸಿರುವ "ನಮ್ಮವರು- ನಮ್ಮ ಹೆಮ್ಮೆ " - ಸಮಾಜದ ವಿಪ್ರ ಬಂಧುಗಳ ವಿಶೇಷವಾದ ಸಾಧನೆಯನ್ನು, ಪ್ರತಿಭೆಯನ್ನು ನಮ್ಮವರೇ ಗುರುತಿಸುವಂತಹ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ರಾಜ್ಯಾಧ್ಯಕ್ಷ ಶ್ರೀ ಅಶೋಕ ಹಾರನಹಳ್ಳಿಯವರು ರಾಜ್ಯದಾದ್ಯಂತ ಈ ಪರಿಕಲ್ಪನೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಆಶಯ ವ್ಯಕ್ತಪಡಿಸಿದರು. ಮಾತ್ರವಲ್ಲ ಇದು  ರಾಜ್ಯಕ್ಕೆ ಮಾದರಿಯಾದ  ಒಂದು ಕಾರ್ಯಕ್ರಮ ಹೊಸತನ್ನು  ಅಚ್ಚುಕಟ್ಟಾಗಿ  ವಿಶಿಷ್ಟವಾಗಿ  ವಿನೂತನವಾಗಿ ಪ್ರಸ್ತುತಪಡಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎಲ್ಲರಿಗೂ ಮಾದರಿ ಈ ಹಿಂದೆ ಬ್ರಹ್ಮ ಸಭೆ ಎಂಬಂತಹ  ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ ದ ಕ ಜಿಲ್ಲಾಘಟಕ ಇದೀಗ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ಮಾತ್ರವಲ್ಲ ರಾಜ್ಯದಲ್ಲಿ ಪ್ರಪ್ರಥಮ ಜಿಲ್ಲಾ ಕಚೇರಿಯನ್ನು ಹೊಂದಿರುವ ಜಿಲ್ಲೆ ದಕ್ಷಿಣ ಕನ್ನಡ . ಇಂತಹ ವೈಶಿಷ್ಟ ಪೂರ್ಣವಾದ ವಿಚಾರಗಳಿಂದಲೇ ದಕ್ಷಿಣ ಕನ್ನಡ ಜಿಲ್ಲೆ ಬುದ್ದಿವಂತರ ಜಿಲ್ಲೆ ಎಂದು ಅನಿಸಿದೆ . ಇಂತಹ ಗುರುತಿಸುವಿಕೆಯಿಂದ ಸಾಧಕರಿಗೆ ಸಾರ್ಥಕತೆ ಬರುತ್ತದೆ ಮತ್ತು ಇತರರಿಗೆ ತಾವು ಸಾಧನೆ ಮಾಡಬೇಕೆಂಬ ಪ್ರೇರಣೆ ನೀಡುತ್ತದೆ ಸಾಧಕರು ಮತ್ತಷ್ಟು ಸಮಾಜಮುಖಿಗಳಾಗುವಂತೇ ಈ ರೀತಿಯ ಕಾರ್ಯಕ್ರಮಗಳು ವೇದಿಕೆಯನ್ನು ನಿರ್ಮಾಣ ಮಾಡುತ್ತದೆ . ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾದ್ಯಂತ ಇದೇ ಪರಿಕಲ್ಪನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯವರು ಅನುಮತಿಯ ಮೇರೆಗೆ ಅಳವಡಿಸಿಕೊಂಡು ಪ್ರಾಯೋಜಿಸಲು ಇಚ್ಚಿಸುತ್ತದೆ ಎಂದು ಅಧ್ಯಕ್ಷೀಯ ಮಾತಿನಲ್ಲಿ ನುಡಿದರು ಕೇವಲ ಒಂದುವರೆ ದಿನದ ಅವಧಿಯಲ್ಲಿ ಈ ಅಚ್ಚುಕಟ್ಟಾದ ಕಾರ್ಯಕ್ರಮವನ್ನು ಆಯೋಜಿಸಿದ ಜಿಲ್ಲಾ ಘಟಕವನ್ನು ತುಂಬು ಮನಸ್ಸಿನಿಂದ ಶ್ಲಾಘಿಸಿದರು ಈ ಜಿಲ್ಲೆಯಿಂದ ಇನ್ನಷ್ಟು ಜನಪರ ಕಾರ್ಯಗಳು ಮೂಡಿಬರಲಿ ಎಂದು ಆಶಿಸಿದರು

ಈ ಸಮಾರಂಭದಲ್ಲಿ ವಿದುಷಿ ಶ್ರೀಮತಿ ಗೀತಾ ಸರಳಾಯ, ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿ ಭಾಜನರು ಹಾಗೂ ವಿದುಷಿ ಶ್ರೀಮತಿ ಪ್ರತಿಮಾ ಶ್ರೀಧರ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಭಾಜನರು, ಇವರ ಸಾಧನೆಯನ್ನು ಗುರುತಿಸಿ ಅಭಿನಂದಿಸಿ ಇಡೀ ಸಮಾಜದ ಸಾಧನೆ ಎಂಬಂತೆ ಆನಂದಿಸಲಾಯಿತು 

 ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟನಾ ಕಾರ್ಯದರ್ಶಿ, ಬಿ.ಎಸ್. ರಾಘವೇಂದ್ರ ಭಟ್,  ಸಹ ಕಾರ್ಯದರ್ಶಿ ಕಾರ್ತಿಕ್ ಬಾಪಟ್, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಉಮೇಶ್ ಶಾಸ್ತ್ರಿ ಮತ್ತು  ಪೊಳಲಿ ಶ್ರೀ ಗಿರಿ ಪ್ರಕಾಶ್ ತಂತ್ರಿ , ಯುವ ವಿಭಾಗದ ರಾಜ್ಯ ಸಹ ಸಂಚಾಲಕರಾದ ಶ್ರೀ ಸುಬ್ರಮಣ್ಯ ಪ್ರಸಾದ್ ಕೊರ್ಯಾರು,  ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಮಹೇಶ್ ಕಜೆ ಸ್ವಾಗತಿಸಿ  ಪ್ರಾಸ್ತಾವಿಕದ ನುಡಿಗಳನ್ನು ಆಡುತ್ತ ಇದು ನಮ್ಮವರನ್ನು ನಮ್ಮ ಮಧ್ಯದಲ್ಲಿ ಸರಳವಾಗಿ ಆಪ್ತವಾಗಿ ಅಭಿನಂದಿಸುವ ಕಾರ್ಯಕ್ರಮ ನಾವು ಮಾಡಲಾರದ ಸಾಧನೆಯನ್ನು ನಮ್ಮವರು ಮಾಡಿದ್ದಾರೆ ಎಂಬಂತೇ ಆನಂದಿಸುವ ಕ್ಷಣ. ಈ ಪರಿಕಲ್ಪನೆಯ ಕಾರ್ಯಕ್ರಮ ನಿಂತ ನೀರಾಗುವುದಿಲ್ಲ ನಿರಂತರ ಹರಿಯುವ ಜೀವನದಿಯಂತೆ ಮುಂದುವರಿಯುತ್ತದೆ. ಇನ್ನು ಮುಂದಕ್ಕೂ ವಿಪ್ರ ಸಮಾಜದ ಇನ್ನೂ ಹಲವು ಸಾಧಕರನ್ನು ಗುರುತಿಸುವ ಅಭಿನಂದಿಸುವ ಆನಂದಿಸುವ ಕಾರ್ಯಕ್ರಮ ಮುಂದಿನ ದಿನಗಳಲ್ಲಿ “ನಮ್ಮವರು ನಮ್ಮ ಹೆಮ್ಮೆ” ಎಂಬ ಶಿರೋನಾಮೆಯಲ್ಲಿ ಮುಂದುವರಿಯುತ್ತದೆ ಎಂದು ನುಡಿದರು, ಶ್ರೀಮತಿ ಪದ್ಮ ಬಿಡೆ ವಂದಿಸಿದರು, ರಾಜ್ಯ ಮಹಿಳಾ ವಿಭಾಗದ ಸಹ ಸಂಚಾಲಾಕಿ ಶ್ರೀಮತಿ ಚೇತನಾ ದತ್ತಾತ್ರೇಯ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಶಶಿಪ್ರಭಾ ಐತಾಳ ಪ್ರಾರ್ಥಿಸಿದರು. ಪೂರ್ಣಿಮಾ ಪೇಜಾವರ ಮುಂತಾದವರು ಸಹಕರಿಸಿದರು

ಈ ಕಾರ್ಯಕ್ರಮದಲ್ಲ ಪ್ರದೀಪ್ ಕುಮಾರ್ ಕಲ್ಕೂರ , ತಾರಾನಾಥ ಹೊಳ್ಳ ಪುರುಷೋತ್ತಮ್ ಭಟ್  ನರಸಿಂಹ ಹೆಗಡೆ  ಶ್ರೀ ಕೃಷ್ಣ ಭಟ್ ಮೀನಗದ್ದೆ  ಶ್ರೀ ಕೃಷ್ಣ ಭಟ್ ಕದ್ರಿ, ಶ್ರೀ ಶ್ರೀಧರ ಹೊಳ್ಳ, ಶ್ರೀ ಚಂದ್ರಶೇಖರ ಮಯ್ಯ, ಶ್ರೀ ಆರ್. ಡಿ. ಶಾಸ್ತ್ರಿ, ಶ್ರೀ ಬಾಲಕೃಷ್ಣ ಐತಾಳ, ರವೀಶ್ ನಾರ್ಷ,  ಎಲ್ಲೂರು ಶ್ರೀ ರಾಮಚಂದ್ರ ಭಟ್, ಶ್ರೀ ಪುರುಷೋತ್ತಮ ಭಟ್, ಶ್ರೀ ಅನಂತ ಪದ್ಮನಾಭ ಭಟ್, ಶ್ರೀಮತಿ ರಶ್ಮಿ ಸರಳಾಯ ಮುಂತಾದ ಹಲವು ಗಣ್ಯರು ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ವಿಪ್ರಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು