ಕೋಲಾರ ಜಿಲ್ಲೆಯ ಮುಳಬಾಗಿಲು ತಂಬಿಹಳ್ಳಿಯಲ್ಲಿರುವ ಶ್ರೀಮಾನ್ ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ ಶ್ರೀ ಮಾಧವತೀರ್ಥ ಮಠದಲ್ಲಿ ಹಿರಿಯ ಶ್ರೀಗಳಾದ ಶ್ರೀ ಶ್ರೀ ಶ್ರೀ ವಿದ್ಯಾ ಸಾಗರ ಮಾಧವ ತೀರ್ಥ ಶ್ರೀಗಳ 91 ನೇ ವರ್ಧಂತಿ ಮಹೋತ್ಸವ ಹಾಗೂ ಶ್ರೀಗಳ ಪಿ.ಎಚ್.ಡಿ.ಥೀಸಿಸ್ ಭಾಗವತ ದಶಮ ಸ್ಕಂದ ಆಂಗ್ಲ ಭಾಷೆಯ ಗ್ರಂಥದ ದ್ವಿತೀಯ ಆವೃತ್ತಿಯ ಬಿಡುಗಡೆ ಮತ್ತು ಚಾತುರ್ಮಾಸ್ಯ ಸಂಕಲ್ಪ ಸಮಾರೋಪ ಸಮಾರಂಭದಲ್ಲಿ ನಮ್ಮ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಅಶೋಕ ಹಾರನಹಳ್ಳಿ ರವರಿಗೆ ಶ್ರೀ ಮಠದ ವತಿಯಿಂದ ವಿಪ್ರ ರತ್ನ ಬಿರುದಾಂಕಿತ ಗೌರವ ಪ್ರಶಸ್ತಿ ನೀಡಿ ಅನುಗ್ರಹಿಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)