ತಾರೀಖು 29/08/2022 ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಇದರ ರಾಜ್ಯ ಉಪಾಧ್ಯಕ್ಷರಾದ ಶ್ರೀಯುತ ಮಹೇಶ್ ಕಜೆಯವರು ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಕಾರ್ಯಕಾರಿಣಿಯ ಸದಸ್ಯರು ಹಾಗೂ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರಾದ ವಿದ್ವಾಂಸ ಶ್ರೀ ಕಶೆಕೋಡಿ ಸೂರ್ಯನಾರಾಯಣ ಭಟ್ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಕಾರ್ಯಕಾರಿಣಿಯ ಸದಸ್ಯರು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಪೊಳಲಿ ಶ್ರೀ ಗಿರಿಪ್ರಕಾಶ ತಂತ್ರಿಯವರು, ತಮ್ಮ ಕುಟುಂಬ ಸಮೇತರಾಗಿ ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಕಡ್ತಿಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಚಾತುರ್ಮಾಸ ವ್ರತ ಕೈಗೊಳ್ಳುತ್ತಿರುವ ಅದಮಾರು ಮಠದ ಶ್ರೀ ಶ್ರೀ ಈಶಪ್ರಿಯ ತೀರ್ಥ ಮಹಾಸ್ವಾಮಿಗಳ ಮಂಗಳದರ್ಶನವನ್ನು ಪಡೆದುಕೊಂಡು ಶ್ರೀ ಗುರುಗಳ ಸನ್ನಿಧಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಧ್ಯೇಯೋದ್ದೇಶಗಳನ್ನು, ಗುರಿಗಳನ್ನು ಮತ್ತು ಯೋಜನೆಗಳನ್ನು ಸವಿವರವಾಗಿ ಪ್ರಸ್ತುತಪಡಿಸಿದ್ದು, ವಿಚಾರ ವಿಮರ್ಶೆ ನಡೆಸಿದ್ದು ಮಾತ್ರವಲ್ಲದೇ ಮಠ ಹಾಗೂ ಸಂಸ್ಥೆಯ ಅತ್ಯುತ್ತಮ ಬಾಂಧವ್ಯವನ್ನು ಕೋರಿ,ಲೋಕದ ಸರ್ವ ಜನರಿಗೂ ಕೂಡಾ ಶ್ರೀ ಗುರುಗಳ ದಿವ್ಯಾಶೀರ್ವಾದ ಇರಲಿ ಎಂಬ ಬಿನ್ನಹದೊಂದಿಗೆ ಮಂಗಳ ಮಂತ್ರಾಕ್ಷತೆಯನ್ನು ಪಡೆದುಕೊಂಡು ತದನಂತರ ಮಹಾಸಭಾದ ವತಿಯಿಂದ ಶ್ರೀ ಗುರುಗಳಿಗೆ ವಿಶೇಷವಾದಂತಹ ಪಾದ ಕಾಣಿಕೆಯನ್ನು ಫಲ ಸಮರ್ಪಣೆಯನ್ನು ಗೈದುದು ಮಾತ್ರವಲ್ಲದೇ ಗೌರವ ಪೂರ್ವಕವಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸ್ಮರಣಿಕೆಯನ್ನು ಕೂಡ ಈ ಶುಭ ಸಂದರ್ಭದಲ್ಲಿ ಶ್ರೀ ಗುರುಗಳಿಗೆ ಹಸ್ತಾಂತರಿಸಿರುತ್ತಾರೆ.